ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಶಾಖಪಟ್ಟಣಂ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ.
ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಂಧ್ರ ಸಿಎಂ, “ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ನಾನು ಕೂಡ ಮುಂದಿನ ದಿನಗಳಲ್ಲಿ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಅಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ.” ಎಂದು ಹೇಳಿದರು.
ರಾಜಕೀಯ ಜನತೆಗೆ ಈ ಘೋಷಣೆಯು ಆಶ್ಚರ್ಯವಾಗುವುದಿಲ್ಲ. ಏಕೆಂದರೆ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು 3 ರಾಜಧಾನಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದ ಬಗ್ಗೆ ಮಾತನಾಡಲಾಗಿತ್ತು ಎಂದಿದ್ದಾರೆ.