ನಾವು ಇಲ್ಲದ ಮೇಲೂ ಎಲ್ಲರೂ ನೆನೆಯೋದು ಒಳ್ಳೆಯ ಕಾರ್ಯಗಳನ್ನು ಮಾತ್ರ : ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸಾಮೀಜಿ

ಹೊಸದಿಗಂತ ವರದಿ ಹಾವೇರಿ :

ಹುಟ್ಟಿದಾಗ ಉಸಿರುಮ ಧ್ವನಿ ಇರುತ್ತದೆ. ಅದೇ ಉಸಿರು ನಿಂತಾಗ ಎಲ್ಲವೂ ಹೋಗುತ್ತದೆ. ಆದರೆ, ನಾವು ಬದುಕಿರುವ ದಿನಗಳಲ್ಲಿ ನಾವು ಮಾಡಿದ ಒಳ್ಳೆ ಹಾಗೂ ಪುಣ್ಯದ ಕೆಲಸಗಳಾವವೂ ನಮ್ಮೊಂದಿಗೆ ಬರುವುದಿಲ್ಲ. ಅವೆಲ್ಲ ಇಲ್ಲೆ ಇದ್ದು ಅವು ಮಾತನಾಡುತ್ತಲೇ ಇರುತ್ತವೆ ಎಂದು ಹಾವೇರಿ ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸಾಮೀಜಿ ಹೇಳಿದರು.

ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ಮುಕ್ತೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯದ ನಿಮಿತ್ಯ ಆಯೋಜಿಸಿದ್ದ ಶಿವಪುರಾಣದ ಕೊನೆ ದಿನದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಹುಟ್ಟಿದಾಗ ಉಸಿರು ಇರುತ್ತದೆ ಆದರೆ ಹೆಸರು ಇರುವುದಿಲ್ಲ. ತಂದೆ ತಾಯಿ ನಮಗೆ ಒಂದು ಹೆಸರನ್ನು ಇಡುತ್ತಾದರೆ ಆದರೆ ಅದು ಸಮಾಜ ನಮ್ಮನ್ನು ಗುರುತಿಸುವುದಕ್ಕೆ ಸೀಮಿತವಾಗುತ್ತದೆ.
ಆದರೆ ಲೋಕ ಯಾವುದೇ ಸ್ವಾರ್ಥವಿಲ್ಲದೆ ನಮ್ಮನ್ನು ಗುರುತಿಸುವುದು ನಾವಬು ಮಾಡಿದ ಉತ್ತಮ ಹಾಗೂ ಲೋಕಕಲ್ಯಾಣಾರ್ಥವಾಗಿ ಮಾಡಿದ ಕಾರ್ಯಗಳಿಂದ ಮಾತ್ರ ಎಂದು ತಿಳಿಸಿದರು.

ಪ್ರಸಕ್ತ ಶಿಡೇನೂರ ಗ್ರಾಮದಲ್ಲಿ ಪ್ರತಿಷ್ಠಾಪಿತವಾಗಿರುವ ಶ್ರೀ ಮುಕ್ತೇಶ್ವರ ದೇವಸ್ಥಾನವನ್ನು ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಿಸುವ ಮೂಲಕ ಅಜರಾಮರವಾಗಿ ಉಳಿದುಕೊಳ್ಳುವಂತಹ ಕೆಲಸವನ್ನು ಶಾಸಕ ನೆಹರು ಓಲೇಕಾರ ಹಾಗೂ ಗ್ರಾಮಸ್ಥರು ಮಾಡಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದರು.

ಪ್ರವಚನಕಾರ ಗವಿಸಿದ್ದಯ್ಯ ಬೂದಿಹಾಳ ಮಾತನಾಡಿ, ಸಮಾಜದಲ್ಲಿ ಮೂರು ತರಹದ ಜನತೆ ಭೇಟಿ ಆಗುತ್ತಾರೆ. ಯಾರು ಏನೇ ಕೆಲಸವನ್ನು ಮಾಡಿದರೂ ಯಾವುದರ ಬಗ್ಗೆಯೂ ತೆಲೆ ಕೆಡಿಸಿಕೊಳ್ಳದೇ ತಮ್ಮಷ್ಟಕ್ಕೆ ತಾವು ಇರುವ ವರ್ಗದವರು. ಇನ್ನು ಕೆಲವರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೋಡಿ ಪ್ರಶಂಸಿಸುವ ಇನ್ನೊಂದು ವರ್ಗವಾದರೆ. ಮಾಡುವ ಕಾರ್ಯದಲ್ಲಿ ತಪ್ಪುಗಳನ್ನೇ ಹುಡುಕುವ ವರ್ಗ ಇನ್ನೊಂದಿರುತ್ತದೆ ಎಂದು ತಿಳಿಸಿದರು.

ಆದರೆ, ಎಲ್ಲರನ್ನು ಗಮನಿಸುತ್ತ ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಮಾಡುವುದರತ್ತ ಗಮನವನ್ನು ಕೊಟ್ಟಾಗ ಮಾತ್ರ ಸಮಾಜಕ್ಕೆ ಒಳ್ಳೆಯದನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ. ಈ ಕುರಿತು ನೀತಿ ಪಾಠ ಹೇಳುವಂತಹ ಆಡು, ಆಕಲು ಹಾಗೂ ಎಮ್ಮೆಯ ಕಥೆಯೊಂದನ್ನು ಹೇಳುವ ಮೂಲಕ ಸೇರಿದ್ದ ಜನಸಮೂಹಕ್ಕೆ ಮನ ಮುಟ್ಟುವಂತೆ ವಿವರಿಸಿದರು.

ವೇದಿಕೆಯಲ್ಲಿ ಶಾಸಕ ನೆಹರು ಓಲೇಕಾರ ಹಾಗೂ ಇತರರಿದ್ದರು. ಐದು ದಿನಗಳ ಕಾಳ ಜರುಗಿದ ಕಾರ್ಯಕ್ರಮಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ಯುವ ಸಮುದಾಯ ಸಮಾಜದ ಆಸ್ತಿ ಆಗಬೇಕು ಎಂದು ಹೇಳುವ ಶಾಸಕ ನೆಹರು ಓಲೇಕಾರ ಅವರು ಈ ಕಾರ್ಯಕ್ರಮದ ಮೂಲಕ ಮುನ್ನುಡಿ ಬರೆದಂತೆ ಕಂಡುಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!