ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು, ವಿವಿಧ ಕ್ಷೇತ್ರದಲ್ಲೂ ಸುಧಾರಣೆಯಾಗುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೆ.
ಇಂದು ಟ್ರೈನುಗಳು (Indian Railway) ಬಹಳಷ್ಟು ಸುಧಾರಣೆಗಳನ್ನು ಕಂಡಿವೆ. ಈ ಕುರಿತು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸಾಮಾನ್ಯ ರೈಲುಗಳ ಬೋಗಿಗಳಲ್ಲಿರುವ ಟಾಯ್ಲೆಟ್ಗಳಿಗೆ (Railway Toilet) ನಾವೀನ್ಯತೆಯ ಸ್ಪರ್ಶ ಕೊಡಲಾಗಿದೆ. ಸಚಿವರು ಖುದ್ದಾಗಿ ಟ್ರೈನುಗಳಿಗೆ ಹೋಗಿ ಶೌಚಾಲಯಗಳ ಪರಿಶೀಲನೆ ನಡೆಸಿದ್ದಾರೆ. ಇದರ ವಿಡಿಯೋವೊಂದನ್ನು ಸಚಿವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Inspected the new upgraded toilet designs for existing coaches. pic.twitter.com/2v426YZiEy
— Ashwini Vaishnaw (@AshwiniVaishnaw) January 31, 2023
ಈ ವಿಡಿಯೋ ಕಂಡು ಬಹಳಷ್ಟು ಜನರು ರೈಲ್ವೆ ಸೌಲಭ್ಯಗಳಲ್ಲಿನ ಸುಧಾರಣೆಗಳನ್ನು ಸ್ವಾಗತಿಸಿದ್ದಾರೆ.
ರೈಲಿನೊಳಗೆ ಸ್ವಚ್ಛತೆ ಉಳಿಸಿಕೊಳ್ಳಬೇಕಾದರೆ ರೈಲ್ವೆ ಸಿಬ್ಬಂದಿ ಜೊತೆಗೆ ಜನರೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ತಮ್ಮ ಮನೆಗಳ ರೀತಿಯಲ್ಲೇ ರೈಲಿನಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಜನರ ಜವಾಬ್ದಾರಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.