ಶೂಟಿಂಗ್ ವೇಳೆ ಕಾಲಿಗೆ ಗಾಯ: ಇಂಜೆಕ್ಷನ್‌ ಗೆ ಹೆದರಿ ಗೊಳೋ ಎಂದು ಅತ್ತ ಸನ್ನಿ ಲಿಯೋನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ‘ಕೊಟೇಶನ್‌ ಗ್ಯಾಂಗ್‌’ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಸನ್ನಿ ಲಿಯೋನ್‌ ಗಾಯಗೊಂಡಿದ್ದು, ವಿಡಿಯೊವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡ ಸನ್ನಿ ಲಿಯೋನ್‌ ಗೊಳೋ ಎಂದು ಅಳುತ್ತಿದ್ದಾರೆ. ಕಾಲಿನ ಬೆರಳಲ್ಲಿ ರಕ್ತ ಬರುತ್ತಿದ್ದು, ಪಕ್ಕದಲ್ಲಿರುವವರು ಸುಧಾರಿಸಿಕೋ ಎಂದು ಸಮಾಧಾನ ಮಾಡುತ್ತಿದ್ದಾರೆ.

ಶೂಟಿಂಗ್ ವೇಳೆ ಕಾಲಿನ ಬೆರಳಿಗೆ ಸಣ್ಣ ಗಾಯವಾಗಿದ್ದು ರಕ್ತ ಹೊರ ಬಂದಿದೆ. ಅಲ್ಲಿದ್ದ ಒಬ್ಬರು, ಸನ್ನಿ ಕಾಲೆಳೆಯಲು ನಿಮಗೆ ಇಂಜೆಕ್ಷನ್‌ ಕೊಡಿಸುತ್ತೇವೆ ಎಂದಾಗ, ಸನ್ನಿ ಭಯಗೊಂಡು ಎಂತಹ ಇಂಜೆಕ್ಷನ್‌!. ನಿನ್ನ ಕೆನ್ನೆಗೆ ಈಗ ಬಾರಿಸುತ್ತೇನೆ ನೋಡು ಎಂದು ಗದರುತ್ತಾರೆ. ಸುತ್ತಮುತ್ತಲಿದ್ದವರು ಸನ್ನಿಗೆ ತಮಾಷೆ ಮಾಡುತ್ತಿದ್ದರೆ, ಸನ್ನಿ ಆಂಬುಲೆನ್ಸ್‌ ಕರೆಯಿರಿ ಎನ್ನುತ್ತಾರೆ.

ಈ ವಿಡಿಯೋ ನೋಡಿದವರು ಸನ್ನಿ ಮಾತಿಗೆ ನಕ್ಕರೆ, ಕೆಲವರು ಬೇಗ ನೋವು ಕಡಿಮೆಯಾಗಲಿ ಎಂದ್ ವಿಶ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸನ್ನಿ, ಜಾಗ್ರತೆಯಿಂದ ಇರಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!