ಬೆಳಗ್ಗೆ ಎದ್ದ ತಕ್ಷಣ ಬೇಕಾಗಿರೋದು ಅಪ್ಡೇಟ್. ಎಲ್ಲಿ ಏನಾಯ್ತು? ಯಾರು ಮೆಸೇಜ್ ಮಾಡಿದ್ದಾರೆ, ಆಫೀಸ್ ಕಥೆ ಏನು ಹೀಗೆ.. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡೋದ್ರಿಂದ ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದ್ದಾ? ಇಲ್ಲಿದೆ ಮಾಹಿತಿ..
- ಬೆಳಗ್ಗೆ ಎದ್ದ ತಕ್ಷಣ ಬೆಡ್ ಮೇಲೆ ಮಲಗಿ ಮೊಬೈಲ್ ನೋಡೋದ್ರಿಂದ ನಿಮ್ಮ ಸ್ಟ್ರೆಸ್ ಲೆವೆಲ್ ಹೆಚ್ಚಾಗುತ್ತದೆ.
- ಮಾನಸಿಕವಾಗಿ ಇದು ಒತ್ತಡ ನೀಡುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಗುಡ್ ಮಾರ್ನಿಂಗ್ ಮೆಸೇಜ್ ನಿರೀಕ್ಷೆ ಮಾಡುತ್ತಿರಬಹುದು, ಆದರೆ ಅದು ಬಾರದಿದ್ದಾಗ ನಿಮ್ಮ ಮೂಡ್ ಹಾಳಾಗುತ್ತದೆ.
- ಬೆಳಗ್ಗೆ ಎದ್ದ ತಕ್ಷಣ ಯಾವುದೇ ನೆಗೆಟಿವ್ ಸುದ್ದಿ ಅಥವಾ ವಿಷಯ ಕೇಳಿದರೆ ನಿಮ್ಮ ಮೆದುಳಿಗೆ ಅದು ದೊಡ್ಡ ಡಿಸ್ಟ್ರಾಕ್ಷನ್.
- ಯಾವುದೋ ಅಪಘಾತ, ರೇಪ್, ಮರ್ಡರ್ ಇಂಥ ವಿಷಯಗಳನ್ನು ಬೆಳಗ್ಗೆಯೇ ನೋಡಿದಾಗ ಜುಗುಪ್ಸೆ ಭಾವನೆ ಬರುತ್ತದೆ.
- ಹಾನಿಯಾಗುವುದು ಮೊಬೈಲ್ನಿಂದ ಅಲ್ಲ, ಮೊಬೈಲ್ನಲ್ಲಿ ನೀವು ಏನನ್ನು ನೋಡುತ್ತೀರ ಎನ್ನುವುದರಿಂದ ಬಳಕೆ ಮಾಡುವಾಗ ಗಮನ ಇರಲಿ.