ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಬರೆದ ಸಿದ್ಧತೆ ನಡೆಸುತ್ತಿದ್ದು, ಈ ವೇಳೆ ಆರೋಪ ಪತ್ಯಾರೋಪಗಳು ಕೂಡ ಹೆಚ್ಚುತ್ತಿದ್ದು, ದಳಪತಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಹೇಳಿಕೆ ನೀಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಎಚ್.ಡಿಕುಮಾರಸ್ವಾಮಿ ಇದೀಗ ಈ ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರ್‍ಎಸ್‍ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂಬುದಾಗಿ ಹೇಳಿದ್ದಾರೆ.