ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕಾಲಿಟ್ಟ ಕೂಡಿಗೆ ಶಾಲೆ ವಿದ್ಯಾರ್ಥಿಗಳು

ಹೊಸದಿಗಂತ ವರದಿ ಕುಶಾಲನಗರ:

ಬಿಹಾರದ ಪಾಟ್ನಾ ಕ್ರೀಡಾಂಗಣದಲ್ಲಿ ಫೆ. 10ರಿಂದ 12 ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕೂಡಿಗೆ ಕ್ರೀಡಾ ಶಾಲೆಯ 9 ಮಂದಿ‌ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕ್ರೀಡಾ ಶಾಲೆಯ ವಿದ್ಯಾರ್ಥಿಗಳಾದ ಡಿ.ಡಿ. ದೀಕ್ಷಿತ್, ಅಂಬಿಕಾ ಎಸ್.ಗೌಡ, ಮಹಮ್ಮದ್ ಆಸಿಫ್, ವಿಶ್ವಾಸ್, ಪುನೀತ್, ರಜಿತೇಶ್, ಎಂ.ಎಂ. ಸ್ನೇಹಾ, ಬಿನಿತಾ ಹಾಗೂ ಫಾತಿಮಾತ್ ರಾಷ್ಟ್ರ ಮಟ್ಟದ ಕ್ರೀಡೆಗೆ ಆಯ್ಕೆಗೊಂಡಿರುವುದಾಗಿ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವ ಕುಮಾರ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!