ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿಯ ಪ್ರತಿಷ್ಠಿತ ಕಾಮಿಡಿ ಶೋ ಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ದಾರೆ.
ಕಪಿಲ್ ಜತೆ ಫೋಟೊ ಹಂಚಿಕೊಂಡಿದ್ದು, ಗಣೇಶ್ ಅಲ್ಲಿಗೆ ಹೋಗಿದ್ಯಾಕೆ ಅನ್ನೋ ಪ್ರಶ್ನೆ ಎಲ್ಲ ಕನ್ನಡಿಗರಿಗೂ ಕಾಡಿದೆ. ಕನ್ನಡದ ನಟರು ಕಪಿಲ್ ಶರ್ಮಾ ಶೋನಲ್ಲಿ ಕಾಣಿಸೋದು ತುಂಬಾನೇ ವಿರಳ. ಸುದೀಪ್ ಈಗಾಗಲೇ ಎರಡು ಬಾರಿ ಶರ್ಮಾ ಶೋನಲ್ಲಿ ಭಾಗಿಯಾಗಿದ್ದಾರೆ.
ಇದೀಗ ಗಣೇಶ್ ಕೂಡ ಲಿಸ್ಟ್ಗೆ ಸೇರಿದ್ದು, ಇಬ್ಬರು ಕಾಮಿಡಿಯನ್ಸ್ ಏನೆಲ್ಲಾ ಮಜ ಕೊಡ್ತಾರೆ ಕಾದುನೋಡಬೇಕಿದೆ.