Tuesday, March 28, 2023

Latest Posts

ಭೂಕಂಪ: ಪರಿಹಾರ ನೆರವಿನೊಂದಿಗೆ ಟರ್ಕಿ ತಲುಪಿದ ಆರನೇ ‘ಆಪರೇಷನ್ ದೋಸ್ತ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೂಕಂಪ ಪರಿಹಾರ ಕಾರ್ಯಗಳಿಗಾಗಿ ರಕ್ಷಣಾ ಸಿಬ್ಬಂದಿ, ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಹೊತ್ತ ಭಾರತದಿಂದ ಆರನೇ ವಿಮಾನ ಟರ್ಕಿಯನ್ನು ತಲುಪಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ತಿಳಿಸಿದ್ದಾರೆ. ಆರನೇ ವಿಮಾನವು ಹೆಚ್ಚಿನ ರಕ್ಷಣಾ ತಂಡ, ಶ್ವಾನದಳ ಮತ್ತು ಅಗತ್ಯವಾದ ಔಷಧಗಳನ್ನು ಹೊಂದಿದೆ.

“ಆರನೇ #ಆಪರೇಷನ್‌ ದೋಸ್ತ್ ವಿಮಾನವು ಟರ್ಕಿಯನ್ನು ತಲುಪಿದೆ. ಹೆಚ್ಚಿನ ಹುಡುಕಾಟಕ್ಕಾಗಿ ರಕ್ಷಣಾ ತಂಡಗಳು, ಶ್ವಾನದಳಗಳು, ಅಗತ್ಯ ಶೋಧ ಮತ್ತು ಪ್ರವೇಶ ಉಪಕರಣಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಪರಿಹಾರ ಪ್ರಯತ್ನಗಳಲ್ಲಿ ನಿಯೋಜಿಸಲು ಸಿದ್ಧವಾಗಿವೆ.” ಎಂದು ಜೈಶಂಕರ್‌ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪ ಟರ್ಕಿ ಮತ್ತು ಪಕ್ಕದ ಸಿರಿಯಾದಲ್ಲಿ ಸಾವಿನ ಸಂಖ್ಯೆ ಎರಡೂ ದೇಶಗಳಲ್ಲಿ 15,000 ಸಂಖ್ಯೆ ಮೀರಿದೆ. ಟರ್ಕಿಯೆಯ ಹಟಾಯ್‌ನಲ್ಲಿರುವ ಈ ಕ್ಷೇತ್ರ ಆಸ್ಪತ್ರೆಯು ಭೂಕಂಪದಿಂದ ಹಾನಿಗೊಳಗಾದವರಿಗೆ ಚಿಕಿತ್ಸೆ ನೀಡಲಿದೆ. ನಮ್ಮ ವೈದ್ಯಕೀಯ ಮತ್ತು ಕ್ರಿಟಿಕಲ್ ಕೇರ್ ತಜ್ಞರು ಮತ್ತು ಸಲಕರಣೆಗಳ ತಂಡವು ತುರ್ತು ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ತಯಾರಿ ನಡೆಸುತ್ತಿದೆ” ಎಂದು ಜೈಶಂಕರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದಕ್ಕೂ ಮುನ್ನ ಬುಧವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು ‘ಆಪರೇಷನ್‌ದೋಸ್ತ್‌’ ಅಡಿಯಲ್ಲಿ ಫೀಲ್ಡ್ ಆಸ್ಪತ್ರೆಯನ್ನು ಭಾರತೀಯ ಸೇನೆಯು ತುರ್ಕಿಯೆಯ ಹಟೇ ಪ್ರಾಂತ್ಯದ ಇಸ್ಕೆಂಡರುನ್‌ನಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ‘ಆಪರೇಷನ್ ದೋಸ್ತ್’ ಅನ್ನು “ಅತ್ಯಂತ ಪ್ರಮುಖ ಕಾರ್ಯಾಚರಣೆ” ಎಂದು ಬಣ್ಣಿಸಿದ್ದಾರೆ ಮತ್ತು ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಎತ್ತಿ ಹಿಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!