Wednesday, December 10, 2025

Rice series 52 | ಫ್ರೂಟ್ ಕರ್ಡ್ ರೈಸ್ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ!

ಸಾಮಾನ್ಯ ಮೊಸರನ್ನಕ್ಕೆ ಸ್ವಲ್ಪ ಟ್ವಿಸ್ಟ್ ಕೊಡ್ಬೇಕಾ? ಹಾಗಿದ್ರೆ ಹಣ್ಣು ಮಿಶ್ರಿತ ಕರ್ಡ್ ರೈಸ್ ಟ್ರೈ ಮಾಡಿ. ರುಚಿಯಲ್ಲೂ ವಿಭಿನ್ನ, ದೇಹಕ್ಕೂ ಲೈಟ್. ಹೊಟ್ಟೆಗೆ ತಂಪಾಗಿದ್ದು ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ವಿಶೇಷ ರೈಸ್ ರೆಸಿಪಿ ಇದು.

ಬೇಕಾಗುವ ಪದಾರ್ಥಗಳು

ಅನ್ನ – 2 ಕಪ್
ಮೊಸರು – 1½ ಕಪ್
ದಾಳಿಂಬೆ ಕಾಳು – ¼ ಕಪ್
ಸೇಬು – ½ ಕಪ್ (ಸಣ್ಣ ಚೂರು)
ದ್ರಾಕ್ಷಿ – ¼ ಕಪ್ (ಕತ್ತರಿಸಿದ)
ಉಪ್ಪು – ರುಚಿಗೆ ತಕ್ಕಂತೆ
ಹಾಲು – 2–3 ಟೇಬಲ್ ಸ್ಪೂನ್ (
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಪ್ಪು ಮೆಣಸಿನಕಾಯಿ – 1
ಕರಿಬೇವು – ಸ್ವಲ್ಪ
ಹಿಂಗು – ಚಿಟಿಕೆ

ತಯಾರಿಸುವ ವಿಧಾನ

ಮೊದಲು ಅನ್ನಕ್ಕೆ ಮೊಸರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಹಾಲು ಹಾಕಿದರೆ ಅನ್ನ ಮೃದುವಾಗುತ್ತದೆ. ಈಗ ಹಣ್ಣುಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಬೇರೆ ಪಾತ್ರೆಯಲ್ಲಿ ಒಗ್ಗರಣೆ ಪದಾರ್ಥಗಳನ್ನು ಹಾಕಿ ಮೊಸರು ಅನ್ನಕ್ಕೆ ಸೇರಿಸಿದರೆ ಫ್ರೂಟ್ ಕರ್ಡ್ ರೈಸ್ ರೆಡಿ.

error: Content is protected !!