Wednesday, October 22, 2025

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಪ್ರಧಾನಿ ಮೋದಿಗೆ ಶಶಿ ತರೂರ್ ಒತ್ತಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಆಗ್ರಹಿಸಿದ್ದಾರೆ.

ಟ್ರಂಪ್ ಅವರನ್ನು ಟೀಕಿಸಿದ ಶಶಿ ತರೂರ್, ಯಾವುದೇ ದೇಶವು ಭಾರತವನ್ನು ಹೀಗೆ ಬೆದರಿಸಲು ಸಾಧ್ಯವಿಲ್ಲ. ನಾವು ಅಮೆರಿಕದ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇ.50ರಷ್ಟು ಸುಂಕ ವಿಧಿಸಬೇಕು. ಇದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಅಮೆರಿಕದ ಇಂತಹ ಕ್ರಮಗಳಿಂದ ದೇಶವು ಬೆದರಬಾರದು ಎಂದು ಹೇಳಿದ್ದಾರೆ.

ನಮ್ಮೊಂದಿಗೆ 90 ಶತಕೋಟಿ ಡಾಲರ್‌ಗಳ ವ್ಯಾಪಾರ ಇರುವುದರಿಂದ ಅಮೆರಿಕದ ಈ ಕ್ರಮ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಮತ್ತು ಎಲ್ಲವೂ ಶೇ. 50 ರಷ್ಟು ಹೆಚ್ಚು ದುಬಾರಿಯಾದರೆ, ಖರೀದಿದಾರರು ಭಾರತೀಯ ವಸ್ತುಗಳನ್ನು ಏಕೆ ಖರೀದಿಸಬೇಕು ಎಂದು ಯೋಚಿಸುತ್ತಾರೆ? ಅವರು ಹೀಗೆ ಮಾಡಿದರೆ, ನಾವು ಅಮೆರಿಕದ ರಫ್ತಿನ ಮೇಲೆ ಶೇ 50 ರಷ್ಟು ಸುಂಕ ವಿಧಿಸಬೇಕು. ಯಾವುದೇ ದೇಶವು ನಮ್ಮನ್ನು ಈ ರೀತಿ ಬೆದರಿಸಬಾರದು ಎಂದು ಹೇಳಿದ್ದಾರೆ.

error: Content is protected !!