ಹೊಸದಿಗಂತ ಡಿಜಿಟಲ್ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳು ನಷ್ಟದಲ್ಲಿ ತೆರೆದಿವೆ. ಸೆನ್ಸೆಕ್ಸ್ 163.13 ಪಾಯಿಂಟ್ ಅಥವಾ 0.27 ಶೇಕಡಾದಷ್ಟು ಕುಸಿದು 60869.13 ಅಂಕಗಳಿಗೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50ಯು 43.60 ಪಾಯಿಂಟ್ ಅಥವಾ 0.24% ನಷ್ಟು ಕುಸಿದು 17886.20 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಸುಮಾರು 986 ಷೇರುಗಳು ಮುನ್ನಡೆ ಸಾಧಿಸಿವೆ, 958 ಷೇರುಗಳು ಹಿನ್ನಡೆಯಲ್ಲಿದ್ದು 144 ಷೇರುಗಳು ಯಥಾಸ್ಥಿತಿಯಲ್ಲಿ ಮುಂದುವರೆದಿವೆ.
ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಶೇಕಡಾ 0.5 ರಷ್ಟು ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಗಳು ಸಹ ಕೆಳಮುಖವಾಗಿವೆ. ವಲಯವಾರು, ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 1 ಕುಸಿದಿದೆ. ಆದರೆ ನಿಫ್ಟಿ ಮೀಡಿಯಾ ಮತ್ತು ನಿಫ್ಟಿ ಮೆಟಲ್ ಸೂಚ್ಯಂಕಗಳು ಸಕಾರಾತ್ಮಕವಾಗಿ ಪ್ರಾರಂಭವಾಗಿವೆ.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್:
ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಐಷರ್ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಯುಪಿಎಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ಲಾಭ ಗಳಿಸಿವೆ.
ಐಟಿಸಿ, ಅಪೊಲೊ ಹಾಸ್ಪಿಟಲ್ಸ್, ಎಚ್‌ಯುಎಲ್, ಎಲ್ ಆಂಡ್ ಟಿ ಮತ್ತು ವಿಪ್ರೋ ಷೇರುಗಳು ನಷ್ಟ ಅನುಭವಿಸಿವೆ.