ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 118ರನ್ ಸಿಡಿಸಿದೆ. ಈ ಮೂಲಕ ಭಾರತ ಗೆಲುವಿಗೆ 119 ರನ್ ಸಿಡಿಸಬೇಕಿದೆ.
.ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕಿ ಹೈಲೇ ಮ್ಯಾಥ್ಯೂಸ್ ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ಸ್ಟಾಫಾನಿ ಟೇಲರ್ ಹಾಗೂ ಶಮೈನ್ ಕ್ಯಾಂಬೆಲ್ಲೇ ಆರ್ಭಟ ವಿಂಡೀಸ್ ತಂಡಕ್ಕೆ ಚೇತರಿಕೆ ನೀಡಿತು.
ಶಮೈನ್ ಕ್ಯಾಂಬೆಲ್ಲೇ 30 ರನ್ ಕಾಣಿಕೆ ನೀಡಿದರು. ಇತ್ತ ಸ್ಟಾಫಾನಿ ಟೇಲರ್ 40 ಎಸೆತದಲ್ಲಿ 42 ರನ್ ಸಿಡಿಸಿದರು.
ಚಿನೆಲ್ ಹೆನ್ರಿ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಆಧರೆ ಶೀಡನ್ ನೇಷನ್ ಹಾಗೂ ಶಬಿಕಾ ಗಜ್ನಬಿ ಜೊತೆಯಾಟ ಮತ್ತೆ ವಿಂಡೀಸ್ ತಂಡಕ್ಕೆ ನೆರವಾಯಿತು. ಶಬೀಕಾ ಗಜ್ನಬಿ ಕೇವಲ 13 ಎಸೆದಲ್ಲಿ 15 ರನ್ ಸಿಡಿಸಿದರು.ಫ್ಲೆಚರ್ ಡಕೌಟ್ ಆದರು. ವಿಕೆಟ್ ಕೀಪರ್ ರಶದಾ ವಿಲಿಯಮ್ಸ್ ಕೇವಲ 2 ರನ್ ಸಿಡಿಸಿ ಔಟಾದರು. ಚೀಡನ್ ನೇಷನ್ 18 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 118 ರನ್ ಸಿಡಿಸಿತು.