Sunday, March 26, 2023

Latest Posts

ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ಮೂರು ದಿನ ತಾಜ್ ಮಹಲ್ ಗೆ ಉಚಿತ ಪ್ರವೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಘಲ್ ಚಕ್ರವರ್ತಿ ಷಹಜಹಾನ್ ಅವರ 368ನೇ ಪುಣ್ಯತಿಥಿಯ ಸ್ಮರಣಾರ್ಥ ಫೆಬ್ರವರಿ 17 ರಿಂದ ಮೂರು ದಿನಗಳವರೆಗೆ ಆಗ್ರಾದ ತಾಜ್ ಮಹಲ್ ಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಷಹಜಹಾನ್ ಅವರ ವಾರ್ಷಿಕ ಉರ್ಸ್ ಸಂದರ್ಭದಲ್ಲಿ ಫೆಬ್ರವರಿ 17, 18 ಮತ್ತು 19 ರಿಂದ ತಾಜ್ ಮಹಲ್ ನಲ್ಲಿ ಪ್ರವಾಸಿಗರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಆಗ್ರಾ ಸರ್ಕಲ್ನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್ ಕುಮಾರ್ ಪಟೇಲ್ ಅವರು ತಿಳಿಸಿದ್ದಾರೆ.

ಪ್ರವಾಸಿಗರಿಗೆ ಫೆಬ್ರವರಿ 17 ಮತ್ತು 18 ರಂದು ಮಧ್ಯಾಹ್ನ 2 ಗಂಟೆಯ ನಂತರ ಸೂರ್ಯಾಸ್ತದವರೆಗೆ ಉಚಿತ ಪ್ರವೇಶವಿರುತ್ತದೆ ಮತ್ತು ಫೆಬ್ರವರಿ 19 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಚಿತ ಪ್ರವೇಶವಿರುತ್ತದೆ .

ಈ ಸಂದರ್ಭದಲ್ಲಿ ಚಾದರ್ ಪೋಶಿ, ಸಂದಲ್, ಗುಸುಲ್ ಮತ್ತು ಕುಲ್ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!