ಮನೆಯಲ್ಲಿ ಆಲೂಗೆಡ್ಡೆ ಇದ್ಯಾ? ಇನ್ಯಾಕೆ ತಡ ಈ ಸಿಂಪಲ್ ಆಲೂಗೆಡ್ಡೆ ಮೊಸರು ಗೊಜ್ಜು ಟ್ರೈ ಮಾಡಿ, ಬೇಗನೆ ಆಗುತ್ತೆ. ಹೆಚ್ಚು ಟೈಮ್ ಕೂಡ ಬೇಡ. ಅನ್ನ, ಚಿತ್ರಾನ್ನ ಅಥವಾ ಪಲಾವ್ ಜೊತೆಗೆ ಈ ಗೊಜ್ಜು ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಆಲೂಗೆಡ್ಡೆ – 2
ಮೊಸರು – 1 ಕಪ್
ಹಸಿಮೆಣಸು – 1
ಕರಿಬೇವು – ಸ್ವಲ್ಪ
ಸಾಸಿವೆ – ½ ಚಮಚ
ಉದ್ದಿನ ಬೇಳೆ – ½ ಚಮಚ
ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಮೊಸರನ್ನು ಚೆನ್ನಾಗಿ ಬೀಟ್ ಮಾಡಿ ಉಪ್ಪು ಸೇರಿಸಿ ಪಕ್ಕಕ್ಕಿಡಿ. ಈಗ ಬೇಯಿಸಿದ ಆಲೂಗೆಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬಹುದು ಅಥವಾ ಸ್ವಲ್ಪ ಮ್ಯಾಶ್ ಮಾಡಿಕೊಳ್ಳಬಹುದು. ಇದನ್ನು ಮೊಸರಿನಲ್ಲಿ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ, ಬಳಿಕ ಉದ್ದಿನ ಬೇಳೆ, ಕರಿಬೇವು, ಹಸಿಮೆಣಸು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಈ ಒಗ್ಗರಣೆಯನ್ನು ಮೊಸರು–ಆಲೂ ಮಿಶ್ರಣದ ಮೇಲೆ ಹಾಕಿ ಚೆನ್ನಾಗಿ ಕಲೆಸಿ. ಕೊತ್ತಂಬರಿ ಸೊಪ್ಪು ಹಾಕಿ.

