ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು (ಕೆಆರ್‌ಪಿಪಿ) ಇಂದು 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಜನಾರ್ಧನರೆಡ್ಡಿ ಮನೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ ಪಿಪಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ನಾಗಠಾಣ, ಕೊಪ್ಪಳ ಜಿಲ್ಲೆಯ ಕನಕಗಿರಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತಿದೆ. ಸಿರುಗುಪ್ಪ ಕ್ಷೇತ್ರದಿಂದ ಧರೇಪ್ಪ ನಾಯಕ್, ಕನಕಗಿರಿ ಕ್ಷೇತ್ರದಿಂದ ಡಾ.ಚಾರುಲ್ ದಾಸರಿ, ನಾಗಠಾಣ ಕ್ಷೇತ್ರದಿಂದ ಶ್ರಿಕಾಂತ, ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ್ ಹಾಗೂ ಹಿರಿಯೂರು ಕ್ಷೇತ್ರದಿಂದ ಮಹೇಶ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಈ ಬಗ್ಗೆ ಕ್ಷೇತ್ರದಲ್ಲಿ ಸಮೀಕ್ಷೆಯನ್ನು ಮಾಡಿಸಿ ಗೆಲ್ಲುವ ಅಭ್ಯರ್ಥಿಗಳನ್ನ ಮಾತ್ರ ಘೋಷಣೆ ಮಾಡುತ್ತಿದ್ದೆವೆ. ನಾನು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಇನ್ನೂ ಸಮಯವಿದೆ ಎಲ್ಲದಕ್ಕೆ ಉತ್ತರ ಸಿಗುತ್ತದೆ. ಶ್ರೀರಾಮುಲು ವಿರುದ್ದ ಅಭ್ಯರ್ಥಿ ಹಾಕುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದರೆ, ಅಭ್ಯರ್ಥಿ ಘೋಷಣೆ ಮಾಡಿದ ದಿನ ಅಸಮಾಧಾನ ಉಂಟಾಗಬಹುದು. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಪರ ಚರ್ಚೆಗೆ ಜನ ಮನ್ನಣೆ ಕೊಡ್ತಾರೆ ಎಂದರು.
ಅಭ್ಯರ್ಥಿಗಳು:
ಸಿರುಗುಪ್ಪ ಕ್ಷೇತ್ರದಿಂದ ಧರೇಪ್ಪ ನಾಯಕ್
ಕನಕಗಿರಿ ಕ್ಷೇತ್ರದಿಂದ ಡಾ.ಚಾರುಲ್ ದಾಸರಿ
ನಾಗಠಾಣ ಕ್ಷೇತ್ರದಿಂದ ಶ್ರಿಕಾಂತ
ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ್
ಹಿರಿಯೂರು ಕ್ಷೇತ್ರದಿಂದ ಮಹೇಶ