Thursday, March 23, 2023

Latest Posts

ತ್ರಿಪುರಾದಲ್ಲಿ ನಡೆಯಿತು ಶಾಂತಿಯುತ ಚುನಾವಣೆ: ಶೇ.81 ಮತದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ರಿಪುರಾ ರಾಜ್ಯ ವಿಧಾನಸಭೆಗೆ ಗುರುವಾರ ಚುನಾವಣೆ ನಡೆದಿದ್ದು(Tripura Election 2023), ಶೇ.81ರಷ್ಟು ಮತದಾನವಾಗಿದೆ.
ಒಟ್ಟು 60 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಶಾಂತಿಯುತವಾಗಿ ಮತದಾನ ನಡೆದಿದ್ದರೂ, ಅಲ್ಲಿಲ್ಲಿ ಹಿಂಸಾತ್ಮಕ ಘಟನೆಗಳು ನಡೆದ ವರದಿಯಾಗಿದೆ. ಈ ಘಟನೆಗಳಲ್ಲಿ ಸಿಪಿಎಂ ನಾಯಕ ಸೇರಿದಂತೆ ಎಡ ಪಕ್ಷದ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ರಾಜ್ಯದ ಸುಮಾರು 40ರಿಂದ 45 ಕಡೆ ಮತದಾನ ಯಂತ್ರಗಳ ಕೈಕೊಟ್ಟ ವರದಿಯಾಗಿದೆ.

60 ಸೀಟುಗಳನ್ನು ಹೊಂದಿರುವ ತ್ರಿಪುರಾ ವಿಧಾನಸಭೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ-ಐಪಿಎಫ್‌ಟಿ ಕೂಟ, ಸಿಪಿಎಂ-ಕಾಂಗ್ರೆಸ್ ಮೈತ್ರಿ ಕೂಟ ಹಾಗೂ ಹೊಸದಾಗಿ ರಾಜಕೀಯಕ್ಕೆ ಅಖಾಡಕ್ಕೆ ಇಳಿದಿರುವ ತಿಪ್ರಾ ಮೋಥಾ ನಡುವೆ ಫೈಟ್ ಇದ್ದು, ಜನರು ಯಾರಿಗೆ ಆಶೀರ್ವದಿಸಿದ್ದಾರೆಂಬದು ಮಾರ್ಚ್ 2ರಂದು ತಿಳಿಯಲಿದೆ.

ಬಿಜೆಪಿ ಮತ್ತು ಅದರ ಮಿತ್ರ ಪಕ್ಷವೂ 55 ಸ್ಥಾನಗಳಲ್ಲಿಸ್ಪರ್ಧಿಸಿದ್ದರೆ, ಸಿಪಿಎಂ 47 ಮತ್ತು ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಿಂದಿನ ರಾಜಮನೆತನದ ಕುಡಿ ಪ್ರದ್ಯೋತ್ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!