ಮೂಲಂಗಿ ಎಂದಾಕ್ಷಣ ಕೆಲವರಿಗೆ ಅದರ ತೀಕ್ಷ್ಣ ವಾಸನೆಯೇ ಮೊದಲು ನೆನಪಾಗಬಹುದು. ಆದರೆ ಅದನ್ನೇ ಕ್ರಿಸ್ಪಿ ಪಕೋಡವಾಗಿ ಬದಲಾಯಿಸಿದರೆ ಅದರ ರುಚಿ ಸಂಪೂರ್ಣ ಬದಲಾಗುತ್ತದೆ. ಹೊರಗೆ ಕ್ರಿಸ್ಪಿ ಒಳಗೆ ಸಾಫ್ಟ್ ಆಗಿರುವ ಮೂಲಂಗಿ ಪಕೋಡ ಸಂಜೆ ಸ್ನ್ಯಾಕ್ ಅಥವಾ ಅತಿಥಿಗಳು ಮನೆಗೆ ಬಂದಾಗ ತಕ್ಷಣ ತಯಾರಿಸಬಹುದಾದ ಸರಳ ರೆಸಿಪಿ.
ಬೇಕಾಗುವ ಸಾಮಗ್ರಿಗಳು:
ಮೂಲಂಗಿ – 1 ದೊಡ್ಡದು
ಶೇಂಗಾ ಹಿಟ್ಟು – 1 ಕಪ್
ಅಕ್ಕಿಹಿಟ್ಟು – 2 ಟೇಬಲ್‌ಸ್ಪೂನ್
ಈರುಳ್ಳಿ – 1
ಹಸಿಮೆಣಸು – 2 (ಸಣ್ಣಗೆ ಕತ್ತರಿಸಿದ್ದು)
ಜೀರಿಗೆ – 1 ಟೀಸ್ಪೂನ್
ಅಜ್ವಾಯಿನ್ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಎಣ್ಣೆ – ಕರಿಯಲು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ತುರಿದ ಮೂಲಂಗಿ, ಈರುಳ್ಳಿ, ಶೇಂಗಾ ಹಿಟ್ಟು, ಅಕ್ಕಿಹಿಟ್ಟು, ಹಸಿಮೆಣಸು, ಜೀರಿಗೆ, ಅಜ್ವಾಯಿನ್, ಉಪ್ಪು ಹಾಗೂ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೂಲಂಗಿಯಲ್ಲಿರುವ ನೀರೇ ಸಾಕು, ಹೆಚ್ಚಾಗಿ ನೀರು ಹಾಕಬೇಡಿ.
ಈಗ ಕೈಯಿಂದ ಪಕೋಡ ಆಕಾರ ಕೊಟ್ಟು, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ. ಹಸಿರು ಚಟ್ನಿ ಅಥವಾ ಟೊಮೇಟೊ ಸಾಸ್ ಜೊತೆ ತಿನ್ನಲು ಬಲು ರುಚಿ.

