ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಿಳೆಯರ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಇಳಿದಿದೆ
ಪೂಜಾ ವಸ್ತ್ರಾಕರ್ ಅನಾರೋಗ್ಯದಲ್ಲಿದ್ದಾರೆ. ಅವರ ಬದಲು ಸ್ನೇಹ ರಾಣಾ ತಂಡಕ್ಕೆ ಬಂದಿದ್ದಾರೆ. ತಂಡದಲ್ಲಿ ಇನ್ನೂ ಒಂದು ಬದಲಾವಣೆ ಇದೆ. ರಾಜೇಶ್ವರಿ ಗಾಯಕ್ವಾಡ್ ಬದಲಿಗೆ ರಾಧಾ ಯಾದವ್ ಸ್ಥಾನ ಪಡೆದಿದ್ದಾರೆ.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದರೆ, ಭಾರತ ತಂಡ ಆಡಿದ ನಾಲ್ಕು ಪಂದ್ಯದಲ್ಲಿ 3ರಲ್ಲಿ ಗೆದ್ದು ಗುಂಪಿನ 2ನೇ ಸ್ಥಾನಿಯಾಗಿ ಸೆಮಿಫೈನಲ್ ಹಂತಕ್ಕೇರಿತ್ತು.