ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಇಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮರಾಗಿದ್ದಾರೆ.
ಸುಕ್ಮಾ ಜಿಲ್ಲೆಯ ಜಗರಗುಂದ ಮತ್ತು ಕುಂಡೆಡ್ ಗ್ರಾಮಗಳಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಎನ್ಕೌಂಟರ್ನಲ್ಲಿ ಡಿಆರ್ಜಿ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬಲ್ ಕುಂಜ್ರಾಮ್ಜೋಗ ಮತ್ತು ಕಾನ್ಸ್ಟೇಬಲ್ ವಂಜಮ್ ಭೀಮ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಸುಕ್ಮಾ ಜಿಲ್ಲೆಯ ಕುಂಡೆಡ್ ಬಳಿ ನಕ್ಸಲೀಯರು ಮತ್ತು CRPF ಯೋಧರ ನಡುವೆ ಎನ್ಕೌಂಟರ್ ನಡೆದಿದೆ.
ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಜಾಗರಗುಂದ ಪೊಲೀಸ್ ಠಾಣೆಯಿಂದ ಡಿಆರ್ಜಿ ತಂಡವನ್ನು ಗಸ್ತು ತಿರುಗಲು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.