ಟೀಮ್ ಇಂಡಿಯಾದಲ್ಲಿ ಮತ್ತೊಂದು ಮದುವೆ ಸಂಭ್ರಮ: ಫೆ.27ರಂದು ಹಸೆಮಣೆ ಏರಲಿದ್ದಾರೆ ಸ್ಟಾರ್ ಆಲ್​ರೌಂಡರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಶಾರ್ದೂಲ್ ಠಾಕೂರ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಭಾರತದ ಆಲ್‌ರೌಂಡರ್ ಶಾರ್ದೂಲ್ ಫೆಬ್ರವರಿ 27 ರಂದು ಬೇಕರಿ ಉದ್ಯಮದಲ್ಲಿ ತೊಡಗಿಕೊಂಡಿರುವ ಮಿಥಾಲಿ ಪಾರುಲ್ಕರ್ ಅವರ ಕೈ ಹಿಡಿಯಲಿದ್ದಾರೆ. ಶಾರ್ದೂಲ್ ಮತ್ತು ಮಿಥಾಲಿ ಈ ಹಿಂದೆಯೇ ಅಂದರೆ, 2021 ರ ನವೆಂಬರ್​ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಶಾರ್ದೂಲ್ ಮತ್ತು ಮಿಥಾಲಿ ಬಹಳ ದಿನಗಳ ಹಿಂದೆಯೇ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಮದುವೆ ಮುಂದೂಡಲಾಗಿತ್ತು. ಇದೀಗ ಇಬ್ಬರೂ ಮುಂಬೈ ಬಳಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಇನ್ನು ಶಾರ್ದೂಲ್ ಕೈಹಿಡಿಯಲ್ಲಿರುವ ಭಾವಿ ಪತ್ನಿ ಮಿಥಾಲಿ ಮಾಡೆಲಿಂಗ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಇದರ ಜೊತೆಗೆ ಹಲವು ದೊಡ್ಡ ಕಂಪನಿಗಳಲ್ಲಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!