ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಗೆಲುವಿನಗಾಗಿ ಪಕ್ಷಗಳು ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇದೀಗ ಬೆಂಗಳೂರಿನಲ್ಲಿ (Bengaluru) ವಿದೇಶಿ ನೋಟುಗಳು ರಾರಾಜಿಸುತ್ತಿವೆ.
ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ (BBMP) ಆಶಾ ಕಾರ್ಯಕರ್ತರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ವಿದೇಶಿ ನೋಟುಗಳನ್ನ ಹಂಚಿದ್ದಾರೆ.
ಪಾದರಾಯನಪುರದ ವಾರ್ಡ್ 135, ಜೆಜೆಆರ್ ನಗರದ ವಾರ್ಡ್ 136 ಹಾಗೂ ರಾಯಪುರಂನ ವಾರ್ಡ್-127ರ ಆಶಾ ಕಾರ್ಯಕರ್ತರಿಗೆ ಸೌದಿ ಅರೇಬಿಯಾದ 500 ರಿಯಾಲ್ ಮುಖಬೆಲೆಯ ನೋಟುಗಳನ್ನ ಹಂಚಿಕೆ ಮಾಡಿದ್ದಾರೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್‌ಗಳನ್ನೂ ಹಂಚಿದ್ದಾರೆ. ಈ ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಸೌದಿ ಅರೇಬಿಯಾದ (Saudi Arabia) 500 ರಿಯಾಲ್ ಮುಖಬೆಲೆಗೆ ಭಾರತದಲ್ಲಿ 11,058 ರೂ. ಮೌಲ್ಯ ಇದೆ. ವಿದೇಶಿ ನೋಟುಗಳನ್ನು ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ (BJP) ಭಾರೀ ವಿರೋಧ ವ್ಯಕ್ತವಾಗಿದೆ.