Tuesday, March 28, 2023

Latest Posts

ಕಮಾಲ್ ಮಾಡದ ಸೆಲ್ಫೀ: ಸೋಲಿನ ಹೊಣೆಹೊತ್ತ ಅಕ್ಷಯ್ ಕುಮಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎರಡು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಸೆಲ್ಫೀ ಸಿನಿಮಾ ರಿಲೀಸ್ ಆಗಿದೆ. ಆದ್ರೆ ಸಿನಿಮಾ ಸಿನಿ ಪ್ರಿಯರನ್ನು ತಲುಪುವಲ್ಲಿ ವಿಫಲವಾಗಿದೆ.
ಅಂದುಕೊಂಡಷ್ಟು ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಸೋತಿದೆ.

ಇದೀಗ ಈ ಸೋಲಿನ ಹೊಣೆಯನ್ನು ಸ್ವತಃ ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ. ಈ ಸೋಲು ನನಗೇನೂ ಹೊಸದಲ್ಲ ಎಂದು ಅವರು ಆಡಿದ್ದಾರೆ.

ನನ್ನ ಸಿನಿಮಾಗಳ ಗೆಲುವು ಎಷ್ಟಿದೆಯೋ, ಸೋಲು ಅಷ್ಟೇ ಇದೆ. ಸತತವಾಗಿ ನನ್ನ ಸಿನಿಮಾಗಳು ಸೋತಿವೆ. ಮತ್ತೆ ಗೆದ್ದಿದ್ದೇನೆ. ಹಾಗಾಗಿ ಸೋಲು ನನಗೆ ಹೊಸದಲ್ಲ. ಇದರಿಂದ ಪಾಠ ಕಲಿತುಕೊಳ್ಳುತ್ತಲೇ ಬಂದಿದ್ದೇನೆ. ಈಗಲೂ ಕಲಿಯುತ್ತೇನೆ. ಇದೊಂದು ಎಚ್ಚರಿಕೆಯ ಪಾಠವಾಗಿ ನಾನು ತಗೆದುಕೊಳ್ಳುತ್ತೇನೆ. ಈ ಸಿನಿಮಾವನ್ನು ಪ್ರೇಕ್ಷಕರು ನೋಡಲಿಲ್ಲ ಎಂದು ಅವರನ್ನು ದೂಷಿಸುವುದು ತಪ್ಪು ಎಂದು ಅಕ್ಷಯ್ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!