‘ಅಪ್ಪ ನನಗೆ ಯಾರಾದ್ರೂ ಏನಾದ್ರು ಸ್ವಲ್ಪ ಹೇಳಿದ್ರೆ ತುಂಬಾ ಬೇಗ ಬೇಜಾರಾಗುತ್ತೆ. ಮತ್ತೆ ವಾಪಾಸ್ ಸರಿ ಆಗ್ಬೇಕಾದ್ರೆ ತುಂಬಾ ಟೈಮ್ ಬೇಕಾಗುತ್ತೆ, ನಾನು ಯಾಕೆ ಹೇಗೆ ಅಪ್ಪ?’ ಅಂತ ಅವಳು ಅಪ್ಪನಲ್ಲಿ ಕೇಳುತ್ತಾಳೆ.
‘ಅಷ್ಟೇನಾ ನಿನ್ನ ಸಮಸ್ಯೆ.. ಅದಿಕ್ಕೆ ನಾನು ಉತ್ತರ ಕೊಡುತ್ತೇನೆ. ಅದಕ್ಕೂ ಮುಂಚೆ ಆ ಬುಟ್ಟಿಯಲ್ಲಿರೋ ಕೆಲವು ಆಪಲ್ ತಗೊಂಡು ಬಾ. ನಾನು ನೀನು ತಿನ್ನೋಣ’ ಅಂತ ಹೇಳ್ತಾರೆ. ಆ ಹುಡುಗಿ ಬುಟ್ಟಿಯಲ್ಲಿರೋ ಹಣ್ಣುಗಳನ್ನ ನೋಡಿ ಅದರಲ್ಲಿ ಚನ್ನಾಗಿರೋ 2 ಹಣ್ಣು ತಗೊಂಡು ಅಪ್ಪನ ಹತ್ತಿರ ಬರ್ತಾಳೆ.
ಅಪ್ಪ ಕೇಳ್ತಾರೆ ‘ಇದೆ ಎರಡು ಹಣ್ಣು ಯಾಕೆ ತಂದೆ’ ಅಂತ. ಅವಳು ಹೇಳ್ತಾಳೆ ‘ಇನ್ನುಳಿದ 2 ಹಣ್ಣು ಹಾಳಾಗಿತ್ತು, ಅದನ್ನ ತಿಂದ್ರೆ ನಮ್ಮ ಆರೋಗ್ಯ ಹಾಳಾಗುತ್ತೆ ಗ್ಯಾರಂಟಿ ಅದಿಕ್ಕೆ ಇವೆರಡು ತಂದೆ ಅಂತ. ಅಪ್ಪ ನಗುತ್ತ ಸೇಮ್ ನಮ್ಮ ದೇಹಕ್ಕೆ ಹೇಗೆ ಫುಡ್ ತಿನ್ನೋಕೆ ಕೊಡ್ತಿವೋ ಹಾಗೆ ನಮ್ಮ ಮೆದುಳು ಕೂಡ ನೋಡಿದ್ದು ಕೇಳಿದ್ದು ಎಲ್ಲಾ ತಗೊಳುತ್ತೆ.
ಆದರೆ ನಾವು ನಮ್ಮ ಅರೋಗ್ಯ ಚೆನ್ನಾಗಿರಲಿ ಅಂತ ಒಳ್ಳೆಯ ಆಹಾರನೇ ತೊಗೋತೀವಿ ಅಲ್ವಾ, ಹಾಗೇನೇ ನಮ್ಮ ಮನಸ್ಸಿಗೆ, ನಮ್ಮ ಬುದ್ದಿಗೆ ಪಾಸಿಟಿವ್ ಆಗಿರೋ ವಿಷಯಗಳನ್ನೇ ತಗೊಂಡ್ರೆ ನಾವು ಕೂಡ ಶಾಂತವಾಗಿ, ಸಂತೋಷವಾಗಿ ಇರಬಹುದು.

