ಪಿಯುಸಿಲಿ ಕಡಿಮೆ ಮಾರ್ಕ್ಸ್ ಬಂದವಳನ್ನು ಮದುವೆ ಆಗೋದಿಲ್ಲ, ಶಾದಿ ಕ್ಯಾನ್ಸಲ್ ಮಾಡಿದ ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಕನೌಜ್‌ನಲ್ಲಿ ಪಿಯುಸಿಯಲ್ಲಿ ಕಡಿಮೆ ಅಂಕ ಬಂದ ಹುಡುಗಿಯನ್ನು ಮದುವೆಯಾಗೋದಿಲ್ಲ ಎಂದು ವರ ರಿಜೆಕ್ಟ್ ಮಾಡಿದ ಘಟನೆ ನಡೆದಿದೆ.

ಬಾಗವಾನಾ ಗ್ರಾಮದ ಸೋನು ಎಂಬಾತನಿಗೆ ಸೋನಿ ಜತೆ ಮದುವೆ ನಿಶ್ಚಯವಾಗಿತ್ತು, ಮದುವೆ ತಯಾರಿಯಲ್ಲಿದ್ದಾಗ, ಪಿಯುಸಿಯಲ್ಲಿ ಅಂಕ ಕಡಿಮೆ ಬಂದಿದೆ, ಈ ಹುಡುಗಿಯನ್ನು ಮದುವೆ ಆಗೋದಿಲ್ಲ ಎಂದು ಸೋನು ರಿಜೆಕ್ಟ್ ಮಾಡಿದ್ದಾನೆ.

ಆದರೆ ವಧುವಿನ ಮನೆಯವರು ಈ ಮಾತನ್ನು ಸ್ವೀಕರಿಸಿಲ್ಲ, ವರದಕ್ಷಿಣೆ ನೀಡದ ಹಿನ್ನೆಲೆ ಏಕಾಏಕಿ ಮದುವೆ ರದ್ದುಮಾಡಿದ್ದು, ಕ್ಷುಲ್ಲಕ ಕಾರಣ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ವರನ ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಮದುವೆಗೆಂದು ಬಂಗಾರ ನೀಡಿ, ಮದುವೆಯ ದಿನಾಂಕವನ್ನು ನಿಶ್ಚಯ ಮಾಡಿಯಾಗಿತ್ತು, ವರದಕ್ಷಿಣೆ ನೀಡೋದಕ್ಕೆ ಸೋನಿ ಕುಟುಂಬ ನಿರಾಕರಿಸಿದ್ದು, ಕ್ಷುಲ್ಲಕ ಕಾರಣ ನೀಡಿ ಮದುವೆಯನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!