Friday, December 12, 2025

SHOCKING | ಸತ್ತಂತೆ ನಟಿಸಿ ದರೋಡೆಕೋರರಿಂದ ಬಚಾವ್‌ ಆದ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ಒಂಟಿ ಮಹಿಳೆ ಇರುವ ಪಕ್ಕಾ ಮಾಹಿತಿ ಆಧರಿಸಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬೆದರಿಕೆ ಹಾಕಿ, ಕೈ, ಕಾಲು, ಬಾಯಿ ಮತ್ತು ಕಣ್ಣು ಕಟ್ಟಿ ಮನೆಯಲ್ಲಿರುವ ಕೆಜಿಗಟ್ಟಲೆ ಚಿನ್ನವನ್ನು ದೋಚಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಟೌನ್‍ನ ಇಲಾಹಿನಗರದಲ್ಲಿ ನಡೆದಿದೆ.

ದರೋಡೆಗೂ ಮೊದಲು ಮಹಿಳೆ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದ್ದು, ಸತ್ತಂತೆ ನಟಿಸಿ ದುರುಳರಿಂದ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳು ಮುಬಾರಕ್​​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇಲಾಹಿನಗರದ ನಿವಾಸಿಯಾಗಿರೋ ಮುಬಾರಕ್​​ರ ಮನೆಯಲ್ಲಿದ್ದ ಗಂಡ, ಮಕ್ಕಳು, ಸೊಸೆ ಸೇರಿ ಎಲ್ಲರೂ ಅಜ್ಮೀರ್ ದರುಶನಕ್ಕೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದು, ಮಚ್ಚನ್ನು ಮುಬಾರಕ್ ಕತ್ತಿಗಿಟ್ಟು ಪ್ರಾಣ ಬೆದರಿಕೆ ಹಾಕಿದ್ದಾರೆ. ರಾತ್ರಿಯಿಡೀ ಮನೆಶೋಧ ಮಾಡಿರುವ ದುಷ್ಕರ್ಮಿಗಳು, ಮುಬಾರಕ್‍ಗೆ ಸೇರಿರುವ ಅವರ ತಂದೆ-ತಾಯಿ ಗಿಫ್ಟ್​​ ನೀಡಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ತನ್ನ ಸೊಸೆಯ ಅಣ್ಣ ಮತ್ತು ಮತ್ತೋರ್ವ ಅಪರಿಚಿತನೇ ಮನೆಗೆ ನುಗ್ಗಿ ದರೋಡೆ ನಡೆಸಿರೋದಾಗಿ ಮುಬಾರಕ್​ ಆರೋಪಿಸಿದ್ದಾರೆ.

ಇನ್ನು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಚಾಣಾಕ್ಷತೆ ಮೆರೆದಿದ್ದು, ಸಿಸಿ ಕ್ಯಾಮರಾ ವೈರ್​​ಗಳನ್ನು ಕತ್ತರಿಸಿದ್ದಾರೆ. ದರೋಡೆಕೋರರನ್ನು ತಾನು ನೋಡಿದ್ದೇನೆ ಎಂದು ಹಲ್ಲೆಗೊಳಗಾದ ಮಹಿಳೆ ಮುರಾಕ್​​ ಹೇಳುತ್ತಿದ್ದರೂ ಆಕೆಯ ಕುಟುಂಬಸ್ಥರ ಹೇಳಿಕೆ ಇದಕ್ಕೆ ಭಿನ್ನವಾಗಿದೆ. ಮುಬಾರಕ್ ಗಂಡ, ಮಕ್ಕಳು, ಮುಬಾರಕ್ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ನಮ್ಮ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣವೇ ಇರಲಿಲ್ಲ ಎಂಬ ಅಚ್ಚರಿಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ.

error: Content is protected !!