ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ಭೀಕರ ಬಸ್ ಅಪಘಾತ ನಡೆದಿದ್ದು, ಘಟನೆಯಲ್ಲಿ 17 ಚಿನ್ನದ ಗಣಿಗಾರರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ.
ತಖರ್ ಪ್ರಾಂತ್ಯದ ಚಾಹ್ ಅಬ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಂಜಿರ್ ಪ್ರದೇಶದಲ್ಲಿರುವ ಚಿನ್ನದ ಗಣಿಗೆ ತೆರಳುವ ವೇಳೆ ಬಸ್ ಪಲ್ಟಿಯಾಗಿದೆ. ತಾಲಿಬಾನ್ ನೇಮಿಸಿದ ಚಾಹ್ ಅಬ್ ಜಿಲ್ಲಾ ಗವರ್ನರ್ ಮುಲ್ಲಾ ಜಮಾನುದ್ದೀನ್ ಪ್ರಕಾರ ಘಟನೆಯಲ್ಲಿ ಸಾವನ್ನಪ್ಪಿರುವವರು ಮತ್ತು ಗಾಯಾಳುಗಳು ಚಿನ್ನದ ಗಣಿ ಕೆಲಸಗಾರರು. ಅಂಜಿರ್ ಪ್ರದೇಶದಲ್ಲಿ ಚಾಹ್ ಅಬ್ ಸೆಂಟರ್ ಮತ್ತು ಗಣಿಗಳ ನಡುವೆ ಬಸ್ ರಸ್ತೆಯನ್ನು ತಿರುಗಿಸುವ ವೇಳೆ ಪಲ್ಟಿಯಾದಾಗ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.