ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೆಫ್ ಆಗಿ ಕೆಲಸ ಮಾಡುತ್ತಿದ್ದರೂ ಕಳ್ಳತನವನ್ನೇ ಸೈಡ್ ಹಾಬಿ ಮಾಡಿಕೊಂಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಆತ ಕಳ್ಳತನ ಮಾಡುವುದಕ್ಕೆ ಮಹಾರಾಷ್ಟ್ರದಿಂದ ಕನ್ಯಾಕುಮಾರಿಗೆ ಹೊರಟಿದ್ದ. ಆದರೆ ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದವನನ್ನು ಟಿಸಿ ಟಿಕೆಟ್ ಚೆಕ್ ಮಾಡಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಕೆಳಗೆ ಇಳಿಸಿದ್ದರು.
ಜೇಬಲ್ಲಿ ಒಂದು ರೂ. ಇಲ್ಲದೆ ನಗರದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಯಶಸ್ವಿಯಾಗಿ ಮನೆ ಕಳ್ಳತನ ಕೂಡ ಮಾಡಿದ್ದ. ಬಳಿಕ ವಾಪಸ್ ಮಹಾರಾಷ್ಟ್ರಕ್ಕೆ ಪರಾರಿ ಆಗುತ್ತಿದ್ದ ಖತರ್ನಾಕ್ ಕಳ್ಳನನ್ನು ಇದೀಗ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಪೊಲೀಸರು ಒಬ್ಬ ಖತರ್ನಾಕ್ ಕಳ್ಳನನ್ನು ಲಾಕ್ ಮಾಡಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ನವೀನ್ ಜೋಶಿ ಬಂಧಿತ ಕಳ್ಳ. ಮೂಲತಃ ಕಾರವಾರ ಜಿಲ್ಲೆಯವನಾದ ನವೀನ್, ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದ. ಹೋಟೆಲ್ವೊಂದರಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ನವೀನ್ಗೆ ದುಡಿದ ದುಡ್ಡು ಕುಡಿಯುವುದಕ್ಕೆ ಸಾಕಾಗುತ್ತಿರಲಿಲ್ಲ. ಹಾಗಾಗಿ ತಾನು ಮಾಡಿದ್ದ ಕೆಲಸದ ಜೊತೆಗೆ ಕಳ್ಳತನ ಪ್ರವೃತ್ತಿಯಾಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೆಲಸದ ಜತೆಗೆ ಕಳ್ಳತನ ʼಸೈಡ್ ಹಾಬಿʼ, ಎಣ್ಣೆಗಾಗಿ ಕಂಬಿ ಎಣಿಸಿದ ಶೆಫ್

