ಬುಧವಾರ, 22 ಮಾರ್ಚ್ 2023, ಮಂಗಳೂರು
ಮೇಷ
ವೃತ್ತಿಯಲ್ಲಿ ಉನ್ನತಿ ಸಾಧಿಸುವುದು ನಿಮ್ಮ ಆದ್ಯತೆ. ಆದರೆ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಅವರ ಬೇಕುಬೇಡಗಳನ್ನೂ ಗಮನಿಸಿರಿ.
ವೃಷಭ
ನಿಮ್ಮ ಪಾಸಿಟಿವ್ ಮನಸ್ಥಿತಿ ನಿಮಗೆ ಒಳಿತು ತರುವುದು. ಸಮಸ್ಯೆ ನಿವಾರಣೆಗೆ ನೆರವು ನೀಡುವುದು. ಬಂಧುಗಳ ಭೇಟಿ, ಸಂತೋಷದ ಕಾಲಕ್ಷೇಪ.
ಮಿಥುನ
ಗೊಂದಲದ ಮನಸ್ಥಿತಿ. ಸ್ಪಷ್ಟ ನಿಲುವಿಗೆ ಬರಲಾಗದೆ ತೊಳಲಾಟ. ನಿಮ್ಮ ಪರಿಸ್ಥಿತಿಯನ್ನು ಸರಿಯಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ತಾಳಿರಿ.
ಕಟಕ
ಪ್ರತಿ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ. ಸಣ್ಣ ವಿಷಯ ಬಳಿಕ ದೊಡ್ಡ ಸಮಸ್ಯೆಯಾಗುತ್ತದೆ. ಬಂಧುಗಳ ಜತೆ ಭಾವುಕ ಸನ್ನಿವೇಶ.
ಸಿಂಹ
ಆಪ್ತರಿಂದ ಕೆಲ ವಿಷಯ ಮುಚ್ಚಿಡಲು ಬಯಸುವಿರಿ. ಅದು ನಿಮ್ಮನ್ನು ಮುಜುಗರದ ಸ್ಥಿತಿಗೆ ದೂಡಬಹುದು.ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ.
ಕನ್ಯಾ
ಕೆಲವರ ಕೆಟ್ಟ ಪ್ರಭಾವ ದಿಂದ ಹೊರಬರಲು ಪ್ರಯತ್ನಿಸಿ. ಅವರ ಸಹವಾಸ ನಿಮಗೆ ಒಳಿತು ತರದು. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿರಿ.
ತುಲಾ
ನಿಮ್ಮ ಸುತ್ತಲಿನ ಕೆಲವು ಕಟ್ಟುಪಾಡು ನಿಮಗೆ ಬಂಧನದಂತೆ ಅನಿಸಬಹುದು. ಆತುರದ ನಿರ್ಧಾರ ತಾಳದಿರಿ, ಸಹನೆಯಿಂದ ವರ್ತಿಸಿರಿ.
ವೃಶ್ಚಿಕ
ಭಾವನಾತ್ಮಕ ಏರುಪೇರು. ಆಪ್ತರ ಜತೆ ವೈಮನಸ್ಸು ಉಂಟಾದೀತು. ಹೊಂದಾಣಿಕೆಯಿಂದ ವರ್ತಿಸಿರಿ. ಯಾರ ಮನಸ್ಸೂ ನೋಯಿಸಲು ಹೋಗದಿರಿ.
ಧನು
ಕಷ್ಟಪಡದೇ ಫಲ ದೊರಕಬೇಕು ಎಂದು ಬಯಸದಿರಿ. ಕಠಿಣ ಶ್ರಮಕ್ಕೆ ಫಲ ಸಿಕ್ಕಿಯೇ ಸಿಗುವುದು. ಇತರರ ಮನಸ್ಸು ಅರಿತು ವರ್ತಿಸಿರಿ.
ಮಕರ
ದಿನವಿಡೀ ಹಲವಾರು ಕಾರ್ಯಚಟುವಟಿಕೆ. ಕೆಲವು ಸಮಸ್ಯೆ ಕಡೆಗಣಿಸಬೇಡಿ, ಅವನ್ನು ಪರಿಹರಿಸಲು ಆದ್ಯತೆ ಕೊಡಿ. ಸೂಕ್ತ ಸಹಕಾರ ದೊರಕುವುದು.
ಕುಂಭ
ನಿಮ್ಮ ಗುರಿ ಸಾಧಿಸುವಲ್ಲಿ ಭಾವುಕತೆ ಅಡ್ಡ ಬರದಂತೆ ನೋಡಿಕೊಳ್ಳಿ. ಕೆಲವು ವಿಷಯಗಳಲ್ಲಿ ಕಠಿಣವಾಗಿ ವರ್ತಿಸುವುದೇ ನಿಮಗೆ ಒಳಿತು ತಂದೀತು.
ಮೀನ
ಆಪ್ತ ಜನರ ಜತೆಗೆ ಸಂತೋಷದಿಂದ ಕಾಲ ಕಳೆಯುವ ಅವಕಾಶ. ಕ್ಷುಲ್ಲಕ ವಿಷಯಗಳು ಕೌಟುಂಬಿಕ ಶಾಂತಿ ಕಲಕದಂತೆ ನೋಡಿಕೊಳ್ಳಿ.