ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಧರ್ಮದಲ್ಲಿ ಯುಗಾದಿ ಮತ್ತು ದೀಪಾವಳಿ ಹಬ್ಬಗಳಲ್ಲಿ ಎಣ್ಣೆ ಸ್ನಾನ ಮಾಡುವುದು ಸಾಮಾನ್ಯ. ಅಷ್ಟಕ್ಕೂ ಎಣ್ಣೆ ಸ್ನಾನ ಮಾಡಿ ಏನು ಪ್ರಯೋಜನ? ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ ಗೊತ್ತಾ? ನಾವು ಪ್ರತಿದಿನ ಸ್ನಾನ ಮಾಡುತ್ತೇವೆ. ಆದರೆ ಯುಗಾದಿ ಹಬ್ಬದಂದು ವಿಶೇಷ ಎಣ್ಣೆ ಸ್ನಾನ ಮಾಡುತ್ತೇವೆ. ಅರಳೆಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಸ್ವಲ್ಪ ಬಿಸಿ ಮಾಡಿ ಮೈ-ಕೈ ತಲೆ ತುಂಬೆಲ್ಲಾ ಹಚ್ಚಿ ಬಿಸಿಲಿಗೆ ಮೈಯೊಡ್ಡಿ ಕೆಲ ಸಮಯದ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡವದರು ನರಕಕ್ಕೆ ಹೋಗುತ್ತಾರೆ ಎಂದು ಹಿರಿಯರು ಹೇಳುತ್ತಾರೆ.
- ಚರ್ಮದ ಮೇಲೆ ಎಣ್ಣೆಯಿಂದ ಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಉಂಟಾಗುತ್ತದೆ. ಅಲ್ಲದೆ ಎಣ್ಣೆ ಸ್ನಾನ ಮಾಡುವುದರಿಂದ ಮೈ ಕಾಂತಿ ಹೆಚ್ಚುತ್ತದೆ.
- ಆಯುರ್ವೇದದ ತ್ರಿದೋಷ ತತ್ವದ ಪ್ರಕಾರ, ವಾತ ಪಿತ್ತ ಕಫ ಎಂಬ ಮೂರು ದೋಷಗಳ ನಿವಾರಣೆಗಾಗಿ ಎಣ್ಣೆ ಸ್ನಾನ ಅತ್ಯಗತ್ಯ
- ಅಭ್ಯಂಗ ಸ್ನಾನವು ವ್ಯಕ್ತಿಯ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕಿ ಸಕಾರಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ.
- ಎಣ್ಣೆ ಹಚ್ಚಿದ ಚರ್ಮದ ಮೇಲೆ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಮೇಲೆ ರಕ್ಷಣಾತ್ಮಕ ಪದರ ಏರ್ಪಡುತ್ತದೆ.
- ಈ ಅಭ್ಯಂಜನದಿಂದ ಬೇಸಿಗೆಯಲ್ಲಿ ಚರ್ಮರೋಗಗಳು ಬರದಂತೆ ತಡೆಯಬಹುದು. ಮೊಡವೆಗಳಂತಹ ಸಮಸ್ಯೆಗಳು ದೂರವಾಗುತ್ತವೆ.
- ಎಳ್ಳಿನ ಎಣ್ಣೆಯನ್ನು ಶಿಫಾರಸು ಮಾಡುವುದರ ಹಿಂದೆ ಒಂದು ಕಾರಣವಿದೆ. ಎಳ್ಳಿನ ಎಣ್ಣೆಯು ಇತರ ಎಣ್ಣೆಗಳಿಗಿಂತ ಹೆಚ್ಚು ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಳ್ಳಿನ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಅಧಿಕವಾಗಿರುತ್ತದೆ.
- ಪಾದ, ಕಣ್ಣು, ತಲೆಗೆ ಎಣ್ಣೆ ಮರ್ಜನ ಮಾಡುವುದರಿಂದ ಶಾಖ/ಉರಿ ಹೊರ ಹೋಗಿ ಆರಾಮದಾಯಕವಾದ ನಿದ್ದೆ ಬರುತ್ತದೆ.
ಈ ಯುಗಾದಿ ಹಬ್ಬಕ್ಕೆ ನೀವೂ ನಿಮ್ಮ ಮನೆಯವರಿಗೂ ಎಣ್ಣೆ ಸ್ನಾನ ಮಾಡಿಸಿ ಕಾಯಿಲೆಗಳಿಂದ ಮುಕ್ತರಾಗಿ.