ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಲ್ಲಿಯೇ ಸಂಚಲನ ಮೂಡಿದ್ದ ಕರಾವಳಿಯ ಸಂಸ್ಕೃತಿ, ಭೂತಾರಾಧನೆಯ ಕಥಾಹಂದರದ ‘ಕಾಂತಾರ, ಒಂದು ದಂಥಕತೆ’ಯ ರೂವಾರಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಹು ಕೂತೂಹಲ ಮೂಡಿಸಿರುವ ಈ ಚಿತ್ರದ ಮೊದಲ ಭಾಗದ ಸಿದ್ಧತೆ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟಿದ್ದಾರೆ!
ಕಾಂತಾರ ಪಾರ್ಟ್ 2 (ರಿಷಬ್ ಹೇಳಿಕೆಯಲ್ಲಿ ಪಾರ್ಟ್ 1) ಚಿತ್ರದ ಬರವಣಿಗೆ ಯುಗಾದಿಯಂದು ಆರಂಭವಾಗಿದೆ. ಇದನ್ನು ಖುದ್ದು ಶೆಟ್ಟರೇ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು ಎಂದು ಆರಂಭಿಸಿರುವ ರಿಷಬ್, ರವಣಿಗೆಯ ಆದಿ… ಕಾಂತಾರ ರೈಟಿಂಗ್ ಬಿಗಿನ್ಸ್…’ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅಭಿಮಾನಿಗಳಲ್ಲಿ ಈ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು.
Happy Ugadi !ಬರವಣಿಗೆಯ ಆದಿ…Kantara writing begins ! pic.twitter.com/6nfIfCeEiu
— Rishab Shetty (@shetty_rishab) March 22, 2023