ದಿನಭವಿಷ್ಯ| ನಿಮ್ಮ ಬಹುಕಾಲದ ಧೋರಣೆ ಬದಲಿಸುವ ಪ್ರಸಂಗ ಒದಗೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಯಾವುದೇ ವಿಷಯವನ್ನು ಲಘವಾಗಿ ಪರಿಗಣಿಸಬೇಡಿ. ನಿರ್ಲಕ್ಷ್ಯದ ಧೋರಣೆ  ಹಾನಿ ತಂದೀತು. ವಿದ್ಯಾರ್ಥಿಗಳಿಗೆ  ಸಮಾಧಾನಕರ ದಿನ.

ವೃಷಭ
ನಿಮ್ಮ ಸಮಸ್ಯೆ ಪರಿಹರಿಸಲು ಹೊಸ ಹಾದಿ ಹಿಡಿಯಿರಿ. ಇತರರ ನೆರವು ನಂಬುತ್ತಾ ಕೂರದಿರಿ.   ಆತ್ಮವಿಶ್ವಾಸ ಎಲ್ಲಕ್ಕಿಂತ ಮುಖ್ಯ.

ಮಿಥುನ
ಕೌಟುಂಬಿಕ ಭಿನ್ನಮತ ನಿವಾರಣೆ. ಸೌಹಾರ್ದ ನೆಲೆಸುವುದು. ಮುಖ್ಯ ವ್ಯವಹಾರಕ್ಕೆ ಹಣಕಾಸು ಹೊಂದಿಕೆ ಕಷ್ಟವಾದೀತು. ಆರೋಗ್ಯ ಸಮಸ್ಯೆ ಕಾಡಬಹುದು.

ಕಟಕ
ದಿನವಿಡೀ ಹಲವಾರು ಕಾರ್ಯಗಳ ಒತ್ತಡ.  ಜತೆಗೇ ವ್ಯಕ್ತಿಯೊಬ್ಬರು ನಿಮಗೆ ಸಮಸ್ಯೆ ಸೃಷ್ಟಿಸುತ್ತಾರೆ. ಸಂಯಮ ಕಳಕೊಳ್ಳದಿರಿ. ತಾಳ್ಮೆಯಿಂದ ವರ್ತಿಸಿ.

ಸಿಂಹ
ನಿಮ್ಮ ಆಪ್ತನೆಂದು ಸೋಗುವ ಹಾಕುವ  ವ್ಯಕ್ತಿಯಿಂದ ಸಮಸ್ಯೆ ಉದ್ಭವವಾದೀತು. ಜಾಣತನದಿಂದ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಯಶ.

ಕನ್ಯಾ
ನಿಮ್ಮಲ್ಲಿಂದು ಭಾವ ತೀವ್ರತೆ.  ಇದರಿಂದಾಗಿ ಪ್ರೀತಿ, ದ್ವೇಷ, ನೋವು ನಲಿವು ಎಲ್ಲವನ್ನೂ ಅತಿಯಾಗಿ ಅನುಭವಿಸುವಿರಿ. ತಾಳ್ಮೆಯಿರಲಿ.

ತುಲಾ
ನಿಮ್ಮ ಬಹುಕಾಲದ ಧೋರಣೆ ಬದಲಿಸುವ ಪ್ರಸಂಗ ಒದಗೀತು. ಯಾರೂ ಅಮುಖ್ಯರೆಂದು ಕಡೆಗಣಿಸದಿರಿ. ಆರ್ಥಿಕ ಸ್ಥಿತಿ ಸುಧಾರಣೆ.

ವೃಶ್ಚಿಕ
ಉತ್ಸಾಹದ ದಿನ. ನಿಮ್ಮ ಕಾರ್ಯವನ್ನು ಸುಗಮವಾಗಿ ನೆರವೇರಿಸಲು ಸೂಕ್ತ ಪರಿಸ್ಥಿತಿ ನಿರ್ಮಾಣ. ಅಡ್ಡಿಗಳು ನಿವಾರಣೆ. ಖರ್ಚು ಹೆಚ್ಚಳ.

ಧನು
ಇತರರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ಅದು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ. ಸಹಕಾರ ಹೆಚ್ಚಳ.

ಮಕರ
ಕುಟುಂಬ ಸದಸ್ಯರಿಂದ ಮನೆಯ ಶಾಂತಿ ಕೆಡಬಹುದು. ಅವರ ವರ್ತನೆಗೆ ಕಡಿವಾಣ ಹಾಕಲು ಯತ್ನಿಸಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.

ಕುಂಭ
ಹಲವಾರು ವಿವಾದಗಳು ನಿಮ್ಮನ್ನು ಸುತ್ತುವರಿಯಬಹುದು. ಅದರಿಂದ ಹೊರಬರಲು ಸಹನೆಯಿಂದ ಮತ್ತು ಕೌಶಲ್ಯದಿಂದ ವರ್ತಿಸಿ. ಸಂಘರ್ಷ ಒಳಿತಲ್ಲ.

ಮೀನ
ಬಾಂಧವ್ಯಕ್ಕೆ ಸಂಬಂಧಿಸಿದ ವಿಚಾರವೊಂದು ಮನಸ್ಸಿನ ಶಾಂತಿ ಕದಡುವುದು. ವಿದ್ಯಾರ್ಥಿಗಳಿಗೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಬಹುದು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!