ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನ ಹೃದಯ-ಆತ್ಮವಿದ್ದಂತೆ: ರಿಕ್ಕಿ ಪಾಂಟಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ರಿಷಭ್ ಪಂತ್ ಸದ್ಯ ಚೇತರಿಕೆ ಕಾಣುತ್ತಿದ್ದು, ಈ ನಡುವೆ ಇತ್ತ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಈ ಬಾರಿಯ ಐಪಿಎಲ್ ನಿಂದ ರಿಷಭ್ ಪಂತ್ ಹೊರಉಳಿದಿದ್ದು, ಈ ವೇಳೆ ಮಾತನಾಡಿದ ಕೋಚ್ ರಿಕ್ಕಿ ಪಾಂಟಿಂಗ್ (Ricky Ponting) , ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಹೃದಯ ಮತ್ತು ಆತ್ಮವಿದ್ದಂತೆ ಎಂದು ಹೇಳಿದ್ದಾರೆ.

ಪ್ರತಿ ಪಂದ್ಯದಲ್ಲಿಯೂ ಡಗೌಟ್‍ನಲ್ಲಿ ನನ್ನ ಬಳಿಯೇ ಪಂತ್ ಕುಳಿತುಕೊಳ್ಳುತ್ತಿದ್ದರು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಅವರನ್ನು ಸಾಧ್ಯವಾದಷ್ಟು ರೀತಿಯಲ್ಲಿ ತಂಡದ ಭಾಗವಾಗಿ ಮಾಡಲು ಬಯಸುತ್ತೇವೆ. ನಾವು ಅವರ ಸಂಖ್ಯೆಯನ್ನು ಜೆರ್ಸಿ ಅಥವಾ ಕ್ಯಾಪ್‍ಗಳ ಮೇಲೆ ಇರಲಿದೆ. ಅವರ ಅನುಪಸ್ಥಿತಿಯಲ್ಲಿಯೂ ಅವರು ನಮ್ಮ ನಾಯಕರಾಗಿತ್ತಾರೆ ಎಂದಿದ್ದಾರೆ.

ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಿಲ್ಲ. ಪಂತ್ ಗೈರಿನಲ್ಲಿ ತಂಡವನ್ನು ಡೆವಿಡ್ ವಾರ್ನರ್ (David Warner) ಮುನ್ನಡೆಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!