ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ: ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ದಿನ ಎಂದ ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐಸಿಸಿ ಮಾಜಿ ಅಧ್ಯಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ದಿನವಾಗಿದೆ. ಬಿಜೆಪಿ ಬೇರೆ ಪಕ್ಷದ ನಾಯಕರ ಅಡಗಿಸುವ ಸಲುವಾಗಿ ಮಾಡಿರುವ ಷಡ್ಯಂತ್ರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಹಳ ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಹೋಗಿದ್ದಾರೆ. ಅಂಥವರನ್ನು ಕಳ್ಳರು ಎಂದು ಕರೆದಿದ್ದು ತಪ್ಪಾ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯಹಾಗೂ ಸತ್ಯ ಹೇಳ ಅವಕಾಶ ಇಲ್ವಾ? ಸತ್ಯ ಹೇಳಿದರೆ ಬಿಜೆಪಿಗೆ ತಡೆದುಕೊಳ್ಳಲು ಆಗುವುದಿಲ್ಲ. ಅದನ್ನು ಸಹಿಸದಾಗದೆ ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹಗೊಳಿಸುವ ಕೆಲಸ ಬಿಜೆಪಿ ಮಾಡಿದೆ ಎಂದರು.

ಮಾನಹಾನಿ ಪ್ರಕರಣ ಎರಡು ವರ್ಷ ಶಿಕ್ಷೆ ನೀಡಿದ ನಿದರ್ಶನಗಳಿದಾವಾ? ನ್ಯಾಯಾಲಯ ಆದೇಶ ನೀಡಿದೆ. ಈಗ ಇವರಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಬಿಜೆಪಿ ಸಾರ್ವಜನಿಕ ಹಣ ಲೋಟಿ ಮಾಡಿದವರಿಗೆ ರಕ್ಷಣೆ ನೀಡುತ್ತಿದೆ. ಅಂಥವರಿಗೆ ಶಿಕ್ಷೆ ನೀಡುವುದು ಬಿಟ್ಟು ಸತ್ಯ ಹೇಳಿದವರಿಗೆ ಶಿಕ್ಷೆ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು ೨೫ ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧೆಸಲು ಕಾರ್ಯಕರ್ತ ಹೇಳುತ್ತಿದ್ದಾರೆ. ಕ್ಷೇತ್ರದ ಆಯ್ಕೆ ಹೈಕಮಾಂಡಗೆ ಬಿಟ್ಟಿದ್ದು. ಬಿಜೆಪಿ ಅವರು ಕ್ಷೇತ್ರ ಸಿಗುವುದಿಲ್ಲ ಅಂದರೆ ಅಷ್ಟು ಕ್ಷೇತ್ರದ ಜನರ ಕರೆಯುವುದು ಏಕೆ ಎಂದು ಪ್ರಶ್ನಿಸಿದ ಅವರು, ಸೋಲು ಅವನಿಗೆ ಕರಿತ್ತಾರ ಇಲ್ಲ ಗೆಲ್ಲುವವನಿಗೆ ಕರಿತ್ತಾರಾ? ಅಭಿಮಾನ ಪ್ರೀತಿಯಿಂದ ಕರೆಯುತ್ತಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!