ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಸ್ಟಾರ್ ಹೀರೋ ವಿಜಯ್ ಅವರ ಲೇಟೆಸ್ಟ್ ಸಿನಿಮಾಗೆ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಬಗ್ಗೆ ಒಂದು ರೇಂಜ್ ನಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರಕ್ಕೆ ‘ಲಿಯೋ’ ಎಂಬ ಟೈಟಲ್ ಫಿಕ್ಸ್ ಮಾಡಿದೆ ಚಿತ್ರತಂಡ. ಈಗಾಗಲೇ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಕಾಶ್ಮೀರದಲ್ಲಿ ಅದ್ಧೂರಿ ಶೆಡ್ಯೂಲ್ ಮುಗಿಸಿದೆ.
ಇದೀಗ ಈ ಸಿನಿಮಾದ ಮುಂದಿನ ಶೆಡ್ಯೂಲ್ಗೆ ಲೋಕೇಶ್ ಅಂಡ್ ಟೀಮ್ ರೆಡಿಯಾಗುತ್ತಿದೆ. ಈ ಸಿನಿಮಾದ ಮುಂದಿನ ಶೆಡ್ಯೂಲ್ಗೆ ಚೆನ್ನೈನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಹೊಸ ವೇಳಾಪಟ್ಟಿ ಮಾರ್ಚ್ 29 ರಂದು ಪ್ರಾರಂಭವಾಗಲಿದ್ದು, 17 ದಿನಗಳ ಕಾಲ ನಡೆಯಲಿದೆ. ಈ ಶೆಡ್ಯೂಲ್ ನಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಲಿದೆ ಎಂದು ಕಾಲಿವುಡ್ ಮಾಧ್ಯಮ ಮೂಲಗಳು ತಿಳಿಸಿವೆ. ಜೊತೆಗೆ ಲಿಯೋ ಚಿತ್ರತಂಡ ಹೈದರಾಬಾದ್ನಲ್ಲಿ ಮತ್ತೊಂದು ಶೆಡ್ಯೂಲ್ ಚಿತ್ರೀಕರಣ ನಡೆಸಲಿದೆ.
ಈ ಸಿನಿಮಾದಲ್ಲಿ ವಿಜಯ್ ಪಾತ್ರವನ್ನು ಲೋಕೇಶ್ ಡಿಸೈನ್ ಮಾಡಿದ್ದಾರೆ. ಪ್ರೇಕ್ಷಕರು ನಿರೀಕ್ಷಿಸುವ ಹಲವು ಅಚ್ಚರಿಯ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರೆ. ಈ ಚಿತ್ರದಲ್ಲಿ ಸುಂದರಿ ತ್ರಿಶಾ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.