ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಥೈಲ್ಯಾಂಡ್ನ ಪಶುವೈದ್ಯರ ತಂಡದ ಸುದೀರ್ಘ 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯನ್ನು ರಕ್ಷಿಸಿರುವ ವಿಡಿಯೋ ಇದಾಗಿದೆ.
ಥಾಯ್ಲೆಂಡ್ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ, ಚಂಡಮಾರುತದ ಸಮಯದಲ್ಲಿ 7 ಅಡಿ ಆಳದ ಗುಂಡಿಯೊಂದು ಸಂಪೂರ್ಣವಾಗಿ ಹುಲ್ಲು ಬೆಳೆದು ಮುಚ್ಚಿ ಹೋಗಿತ್ತು. ಆದರೆ ಆ ಗುಂಡಿಯ ಅರಿಯದೇ ಪುಟ್ಟ ಮರಿ ಆನೆ ಹಾಗೂ ಅದನ್ನು ರಕ್ಷಿಸಲು ಹೋದ ತಾಯಿ ಆನೆ ಬಿದ್ದು ಒಳಗೆ ಸಿಕ್ಕಿ ಹಾಕಿಕೊಂಡಿದೆ.
ಈ ವಿಷಯ ಅರಿತ ಪಶುವೈದ್ಯರು ತಂಡ ಭಾರೀ ಮಳೆಯ ಮಧ್ಯೆಯೂ ಸುಮಾರು 3 ಗಂಟೆಗಳ ನಂತರ ಕೂಡ ತಾಯಿ ಹಾಗೂ ಮರಿಯಾನೆಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ತಾಯಿ ಆನೆ ಪ್ರಜ್ಞೆ ತಪ್ಪಿದ್ದರಿಂದ ಕೆಲಹೊತ್ತಿನ ವರೆಗೆ ಸಿಪಿಆರ್ ನೀಡಲಾಗಿತ್ತು. ಬಳಿಕ ತಾಯಿ ಮತ್ತು ಮರಿ ರಸ್ತೆ ದಾಟಿ ಅರಣ್ಯಕ್ಕೆ ಸಾಗಿಹೋಗಿದೆ.
ಈ ದೃಶ್ಯಗಳು ವಿಡಿಯೋದಲ್ಲಿಸೆರೆಯಾಗಿದೆ.
@TheFigen ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಾಯಿ ಮತ್ತು ಮರಿಯಾನೆಯನ್ನು ರಕ್ಷಿಸಿದ ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗೆ ದೇವರು ಸದಾ ಆಶೀರ್ವದಿಸಲಿ ಎಂದು ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
They rescued the mother elephant and her baby, and performed CPR on the mother elephant.
They are amazing people. God bless them! 💞❤️pic.twitter.com/JKxCpk4p9i— The Figen (@TheFigen_) March 21, 2023
ಈ ವೈರಲ್ ವಿಡಿಯೋ ಇದೀಗಾಗಲೇ 8.796 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 4 ಸಾವಿರಕ್ಕಿಂತಲೂ ಹೆಚ್ಚು ರಿಟ್ವೀಟ್ಗಳು, 20 ಸಾವಿರ ಲೈಕ್ಗಳು ಮತ್ತು 426 ಬುಕ್ಮಾರ್ಕ್ಗಳನ್ನು ಪಡೆದುಕೊಂಡಿದೆ.