ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಆರಂಭವಾಗಿದ್ದು, ಮೋಹಕ ತಾರೆ ರಮ್ಯಾ ಮೊದಲ ಎಪಿಸೋಡ್ನಲ್ಲಿ ಕಾಣಿಸಿದ್ದಾರೆ.
ರಮ್ಯಾ ಅವರನ್ನು ಕರೆಸಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರಿಯಾಗಿ ಕನ್ನಡ ಮಾತನಾಡೋಕೆ ಬರೆದವರು ನಮ್ಮ ಸಾಧಕರ ಸೀಟ್ನಲ್ಲಿ ಹೇಗೆ ಕೂರ್ತಾರೆ ಎನ್ನುವ ಪ್ರಶ್ನೆಯೆದ್ದಿತ್ತು.
ಈ ವಾರ ವೀಕೆಂಡ್ ಟೆಂಟ್ನಲ್ಲಿ ಖ್ಯಾತ ನಟ, ಡ್ಯಾನ್ಸ್ ಕೊರಿಯಾಗ್ರಫರ್ ಪ್ರಭುದೇವ ಕಾಣಿಸಲಿದ್ದಾರೆ. ಚಾನೆಲ್ ಪ್ರೋಮೋ ಹಂಚಿಕೊಂಡಿದ್ದು, ಪ್ರಭುದೇವ ಎಪಿಸೋಡ್ಗೆ ಜನ ಕಾತರರಾಗಿದ್ದಾರೆ.