ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಕಾರ್ ಕ್ರೇಜ್ ಇದೆ, ಸಾಕಷ್ಟು ಐಷಾರಾಮಿ ಕಾರ್ಗಳನ್ನು ವಿರಾಟ್ ಖರೀದಿ ಮಾಡಿ ಗ್ಯಾರೇಜ್ನಲ್ಲಿ ಇಟ್ಟಿದ್ದಾರೆ.
ಆದರೆ ಇದೀಗ ಆ ಕಾರ್ಗಳನ್ನು ಮಾರಿದ್ದೇನೆ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ವೃತ್ತಿ ಜೀವನ ಆರಂಭ ಮಾಡಿದಾಗ ಸಿಕ್ಕ ಸಿಕ್ಕ, ಇಷ್ಟಪಟ್ಟ ಕಾರ್ಗಳನ್ನು ಖರೀದಿಸುವ ಶಕ್ತಿ ನನಗಿತ್ತು. ಹಾಗೇ ಖರೀದಿ ಮಾಡಿದ್ದೆ. ಆದರೆ ಈಗ ಇಷ್ಟೊಂದು ಕಾರ್ ನನಗ್ಯಾಕೆ ಎನಿಸುತ್ತದೆ. ಎಷ್ಟೇ ಕಾರ್ ಇದ್ದರೂ ಬಳಸೋದು ಎರಡು ಕಾರ್ ಮಾತ್ರ.
ಉಳಿದದ್ದನ್ನು ಬಳಸೋದು ಇಲ್ಲ, ಅನಗತ್ಯವಾಗಿ ಖರೀದಿ ಮಾಡಿದ ಕಾರ್ಗಳನ್ನು ಮಾರಿದ್ದೇನೆ ಎಂದು ವಿರಾಟ್ ಹೇಳಿದ್ದಾರೆ. ನಿಜವಾಗಿಯೂ ಅವಶ್ಯಕತೆ ಇರುವಷ್ಟು ಕಾರ್ಗಳನ್ನು ಮಾತ್ರ ಬಳಸುತ್ತಿದ್ದೇನೆ ಎಂದಿದ್ದಾರೆ.