Friday, June 9, 2023

Latest Posts

ಹಡಗಿನಲ್ಲಿ ಅಗ್ನಿ‌‌ ಅನಾಹುತ: ಸಮುದ್ರದ ನಡುವೆಯೇ 12 ಮಂದಿ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲೇಡಿ ಮೇರಿ ಜಾಯ್ 3 ಮಿಂಡನಾವೊ ದ್ವೀಪದ ಜಾಂಬೊಂಗಾ ನಗರದಿಂದ ಸುಲು ಪ್ರಾಂತ್ಯದ ಜೋಲೋ ದ್ವೀಪಕ್ಕೆ ತೆರಳುತ್ತಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 12 ಜನ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಹಲವು ಪ್ರಯಾಣಿಕರು ನೀರಿಗೆ ಹಾರಿದ್ದಾರೆ ಎಂದು ವಿಪತ್ತು ಅಧಿಕಾರಿ ನಿಕ್ಸನ್ ಅಲೋಂಜೊ ಹೇಳಿದರು.

ಅಪಘಾತದ ಬಳಿಕ ಮಾಹಿತಿ ಪಡೆದ ಫಿಲಿಪ್ಪೀನ್ಸ್ ಕೋಸ್ಟ್ ಗಾರ್ಡ್ ಮೀನುಗಾರರು ಸೇರಿದಂತೆ 230 ಮಂದಿಯನ್ನು ರಕ್ಷಿಸಿದ್ದಾರೆ. ಅವರಲ್ಲಿ 195 ಪ್ರಯಾಣಿಕರು ಮತ್ತು 35 ಸಿಬ್ಬಂದಿ ಇದ್ದಾರೆ. ಇನ್ನೂ ಏಳು ಮಂದಿ ಪತ್ತೆಯಾಗಿಲ್ಲ ಎಂದು ನಿಕ್ಸನ್ ಅಲೊಂಜೊ ಹೇಳಿದ್ದಾರೆ. ಏಳು ಮಂದಿ ನೀರಿನಲ್ಲಿ ಮುಳುಗಿರುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ಮೃತ 12 ಮಂದಿಯಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ.

ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೆಂಕಿಯಲ್ಲಿ ಅರ್ಧಕ್ಕೂ ಹೆಚ್ಚು ಸುಟ್ಟಿದ್ದ ಹಡಗನ್ನು ಬಸಿಲನ್ ದಡಕ್ಕೆ ತರಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!