ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ರಾಜ್ಯದ ಖಜಾನೆಗೆ ಮದ್ಯದಿಂದ ಹೆಚ್ಚಿನ ಆದಾಯ ದೊರಕುತ್ತಿದೆ.
ಹೌದು, ಇತ್ತೀಚೆಗೆ ಅಂತ್ಯಗೊಂಡ ಆರ್ಥಿಕ ವರ್ಷದ ಆದಾಯದಲ್ಲಿ 32ಸಾವಿರ ಕೋಟಿ ರೂಪಾಯಿ ಮದ್ಯ ಮಾರಾಟದಿಂದ ಸಂಗ್ರಹವಾಗಿದೆ.
ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ದಾಖಲೆಯ 72 ಸಾವಿರ ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಹೆಚ್ಚಿನ ಆದಾಯ ದೊರಕಿರುವುದು ಬಿಯರ್ ಪ್ರಿಯರಿಂದ.
ದಾಖಲೆಯ 42.99ಕೋಟಿ ಲೀಟರ್ ಬಿಯರ್ ಮಾರಾಟವಾಗಿದ್ದು, ಉಳಿದ ಮದ್ಯಕ್ಕಿಂತ ಬಿಯರ್‌ನಿಂದ ಹೆಚ್ಚು ಆದಾಯ ದೊರಕಿದೆ ಎನ್ನಲಾಗಿದೆ. ರಾಜ್ಯದ ಒಟ್ಟು ಮದ್ಯ ಮಾರಾಟದ ಶೇ.70ರಷ್ಟು ಹೈದರಾಬಾದ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಖರೀದಿಯಾಗಿದೆ. ಪ್ರವಾಸೋದ್ಯ, ಶಿಕ್ಷಣಕ್ಕಾಗಿ ಸಾಕಷ್ಟು ಮಂದಿ ಈ ಭಾಗಕ್ಕೆ ಬಂದು ಹೋಗುತ್ತಿದ್ದು, ಮದ್ಯ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.