ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 5.6 ಬಿಲಿಯನ್‌ ಡಾಲರ್‌ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಮಾರ್ಚ್‌ 24ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 5.6 ಬಿಲಿಯನ್‌ ಡಾಲರ್‌ ಏರಿಕೆಯಾಗಿ 578.778 ಬಿಲಿಯನ್‌ ಡಾಲರ್‌ ಗೆ ತಲುಪಿದೆ. ರೂಪಾಯಿ ಚಲನೆಯನ್ನು ನಿಯಂತ್ರಣದಲ್ಲಿಡಲು ಸೆಂಟ್ರಲ್ ಬ್ಯಾಂಕ್ ಕಡಿಮೆ ಮಟ್ಟದಲ್ಲಿ ಡಾಲರ್‌ಗಳನ್ನು ಖರೀದಿಸಿದ್ದರಿಂದ ಮಾರ್ಚ್ 2023 ರಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 17 ಬಿಲಿಯನ್‌ ಡಾಲರ್‌ ನಷ್ಟು ಏರಿಕೆಯಾಗಿದೆ. ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹವು 12.8 ಬಿಲಿಯನ್‌ ಡಾಲರ್‌ ಏರಿಕೆಯಾಗಿ 572.8 ಬಿಲಿಯನ್‌ ಡಾಲರ್‌ ಗೆ ತಲುಪಿತ್ತು.

ಅಕ್ಟೋಬರ್ 2021 ರಲ್ಲಿ ಭಾರತದ ವಿದೇಶಿ ವಿನಿಮಯ (ಫಾರೆಕ್ಸ್) ಸಾರ್ವಕಾಲಿಕ ಗರಿಷ್ಠ 645 ಬಿಲಿಯನ್‌ ಡಾಲರ್‌ ಗೆ ತಲುಪಿತ್ತು. ಆದರೆ ಜಾಗತಿಕ ಬೆಳವಣಿಗೆಗಳಿಂದ ಪ್ರಭಾವಿಸಲ್ಪಟ್ಟ ಒತ್ತಡಗಳ ಪರಿಣಾಮ ರೂಪಾಯಿ ಕುಸಿತವನ್ನು ತಡೆಗಟ್ಟಲು ಕೇಂದ್ರ ಬ್ಯಾಂಕ್‌ ಡಾಲರ್‌ ಮಾರಾಟವನ್ನು ನಡೆಸಿದ ಪರಿಣಾಮ ಮೀಸಲು ಕುಸಿತ ದಾಖಲಾಗಿದೆ.

ಚಿನ್ನದ ಸಂಗ್ರಹವು 1.37 ಬಿಲಿಯಮ್ ಡಾಲರ್‌ಗಳಷ್ಟು ಏರಿಕೆಯಾಗಿ 45.48 ಬಿಲಿಯನ್‌ ಡಾಲರ್‌ಗಳಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!