ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿ ಸರ್ಕಾರವು ಇಟಾಲಿಯನ್ ಭಾಷೆಯೇ ಸಾರ್ವಭೌಮ ಎಂಬುದನ್ನು ಜಾರಿಗೆ ತರುವ ಮೂಲಕ ಇಂಗ್ಲಿಷ್ ಬಳಕೆಯ (Italy To Ban English) ನಿಷೇಧಕ್ಕೆ ಮುಂದಾಗಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ದೇಶದಲ್ಲಿ ವಿದೇಶಿ ಭಾಷೆ ಬಳಕೆ, ಅದರಲ್ಲೂ ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಕರಡು ವಿಧೇಯಕವೊಂದನ್ನು ಮಂಡಿಸಲು ಸಜ್ಜಾಗಿದ್ದಾರೆ.
ಇದರಿಂದಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದರೆ, ಅಂತಹವರಿಗೆ 1.08 ಲಕ್ಷ ಡಾಲರ್ (ಸುಮಾರು 89 ಲಕ್ಷ ರೂಪಾಯಿ) ದಂಡ ವಿಧಿಸುವ ಕ್ರಮವೂ ವಿಧೇಯಕದಲ್ಲಿದೆ. ಆ ಮೂಲಕ ದೇಶದಲ್ಲಿ ಇಟಲಿಯಲ್ಲಿಯೇ ಜನ ವ್ಯವಹರಿಸುವಂತೆ ಮಾಡುವುದು ಮೆಲೋನಿ ಅವರ ಉದ್ದೇಶವಾಗಿದೆ .
ಈಗಾಗಲೇ ಇಂಗ್ಲಿಷ್ ಬಳಕೆಯ ನಿಷೇಧದ ಕುರಿತು ವಿಧೇಯಕದ ಕರಡು ಪ್ರತಿ ಸಿದ್ಧವಾಗಿದೆ. ವಿಧೇಯಕದ ಅಂತಿಮ ಪ್ರತಿ ಸಿದ್ಧವಾಗಿ, ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಅಂಗೀಕಾರ ಪಡೆದ ನಂತರ ಕಾನೂನು ಜಾರಿಗೆ ಬರುತ್ತದೆ. ಆದ್ರೆ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂಬ ಕುರಿತು ಪ್ರಧಾನಿ ಜಾರ್ಜಿಯಾ ಮೆಲೋನಿ ಘೋಷಿಸಿಲ್ಲ. ಇತ್ತ ದೇಶದಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಷೇಧಿಸಲು ಜನಾಭಿಪ್ರಾಯ ಇದೆ.
ಇಟಲಿ ಸಂಸತ್ತು.
ಇನ್ನು ದೇಶದಲ್ಲಿ ಇಂಗ್ಲಿಷ್ ಭಾಷೆಯು ಇಟಲಿಯ ನಾಗರಿಕರ ಆತ್ಮಬಲವನ್ನು, ಸ್ವಾಭಿಮಾನವನ್ನು ಕುಗ್ಗಿಸುತ್ತದೆ. ಹಾಗಾಗಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಇಂಗ್ಲಿಷ್ ಭಾಷೆ, ಪದಗಳ ಬಳಕೆಯನ್ನು ನಿಲ್ಲಿಸಬೇಕು. ಎಲ್ಲರೂ ಇಟಾಲಿಯನ್ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು ಎಂಬ ಉದ್ದೇಶವಾಗಿದೆ. ಜೊತೆಗೆ . ಇ ದೇಶದ ಭಾಷೆಯ ಅಭಿಮಾನದ ಸಂಕೇತವೂ ಆಗಿದೆ. ಹಾಗಾಗಿ, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಇಂಗ್ಲಿಷ್ ಬಳಸಿದವರಿಗೆ ದಂಡ ವಿಧಿಸುವ ಕಾನೂನು ಜಾರಿಗೆ ಚಿಂತನೆ ನಡೆದಿದೆ” ಎಂಬುದಾಗಿ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.