ಭಾರತ ಬದಲು ಬಾಂಗ್ಲಾದಲ್ಲಿ ವಿಶ್ವಕಪ್ ಆಡಲು ಪಾಕ್ ತಯಾರಿ?: ಪಿಸಿಬಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಪಾಕಿಸ್ತಾನ ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡುತ್ತದೆ ಎಂಬ ವಿಚಾರಕ್ಕೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸ್ಪಷ್ಟನೆ ನೀಡಿದೆ.

ಪಾಕ್​ ಪಾಲಿನ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ನಡೆಸುವಂತೆ ಐಸಿಸಿ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ(Najam Sethi) ಖಚಿತಪಡಿಸಿದ್ದಾರೆ.

ಪಾಕ್ ತಂಡ ತನ್ನ ಪಾಲಿನ ಏಕದಿನ ವಿಶ್ವ ಕಪ್​ನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡಲಿದೆ ಎಂದು ವರದಿಯಾಗಿತ್ತು. ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ, ಏಷ್ಯಾಕಪ್‌ನಲ್ಲಿ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಬಗ್ಗೆಯಷ್ಟೇ ಚರ್ಚಿಸಲಾಗಿದೆ. ಆದರೆ ವಿಶ್ವ ಕಪ್​ ಟೂರ್ನಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ತಂಡ ಬರಲು ಒಪ್ಪದ ಕಾರಣ ಪಾಕ್ ಕೂಡ ಭದ್ರತಾ ಕೊರತೆಯ ನೆಪವೊಡ್ಡಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳಲು ಹಿಂದೇಟು ಹಾಕಿದ್ದು ಇದೇ ಕಾರಣಕ್ಕೆ ಪಾಕಿಸ್ತಾನದ ಪಂದ್ಯಗಳು ತಟಸ್ಥ ತಾಣವಾದ ಬಾಂಗ್ಲಾದೇಶದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಈ ವಿಚಾರವನ್ನು ಐಸಿಸಿ ಅಲ್ಲಗಲೆದಿದ್ದರೂ ಕೂಡ ಯಾರು ನಂಬಿರಲಿಲ್ಲ. ಆದರೆ ಇದೀಗ ಪಾಕ್ ಕ್ರಿಕೆಟ್​ ಮಂಡಳಿಯೇ ಈ ವಿಚಾರವಾಗಿ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!