ಹೊಸದಿಗಂತ ವರದಿ ಕಲಬುರಗಿ:
ಬಿಜೆಪಿ ಪಕ್ಷದ ಚಿಹ್ನೆ ಹಾಗೂ ಜಿಲ್ಲಾಧ್ಯಕ್ಷನ ಹೆಸರಿನಲ್ಲಿ ಕ್ರಿಕೆಟ್ ಷಂದ್ಯಾವಳಿ ಆಯೋಜನೆ ಮಾಡಿದ್ದಕ್ಕಾಗಿ ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಮೇಲೆ ಎಫ್.ಐ.ಆರ್.ದಾಖಲಾಗಿದೆ.
ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಗೊಳಿಸಿ,ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು,ಈ ನಡುವೆ. ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಐವರ ವಿರುದ್ಧ ಎಫ್.ಐ.ಆರ್.ದಾಖಲಾಗಿದೆ.
ಶಿವರಾಜ್ ಪಾಟೀಲ್ ರದ್ದೇವಾಡಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜೇವರ್ಗಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.