ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ : 300 ಕ್ಕೂ ಹೆಚ್ಚು ಮನೆಗಳು ನಾಶ, ನಾಲ್ವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಪಂಚದಾದ್ಯಂತ ಅನೇಕ ಕಡೆಗಳಲ್ಲಿ ಇತ್ತೀಚೆಗೆ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಿವೆ. ಈ ನಡುವೆಯೇ ನಿನ್ನೆ ಬೆಳಗ್ಗೆ ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪನವಾಗಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದ ಸಮೀಪವಿರುವ ಪಪುವಾ ನ್ಯೂಗಿನಿಯಾದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು ಯುಎಸ್‌ ಭೂವೈಜ್ಞಾನಿಕ‌ ಸಮೀಕ್ಷೆ ಹೇಳಿದೆ.

ಪೆಸಿಫಿಕ್ ರಾಷ್ಟ್ರದ ಉತ್ತರ ಭಾಗದಲ್ಲಿರುವ ಚಂಬ್ರಿ ಸರೋವರದ ಕೇಂದ್ರಬಿಂದು ಬಳಿ ಭೂಮಿಯಲ್ಲಿ ಆಳವಾದ ಬಿರುಕುಗಳನ್ನು ಉಂಟುಮಾಡಿದೆ.

ಭೂಕಂಪದ ಕೇಂದ್ರ ಬಿಂದುವಿನ ಸುತ್ತಲಿನ 23 ಹಳ್ಳಿಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪಿದ್ದಾರೆ ಮತ್ತು ಕನಿಷ್ಟ 17 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖೀಸಿ ಪಪುವಾ ನ್ಯೂಗಿನಿಯಾ ದೈನಿಕವೊಂದು ವರದಿ ಮಾಡಿದೆ.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಮಿಯ ಮೇಲ್ಮೈಯಿಂದ ಸುಮಾರು 62 ಕಿಲೋಮೀಟರ್ (38 ಮೈಲುಗಳು) ಕೆಳಗೆ 4 ಗಂಟೆಯ ನಂತರ ಭೂಕಂಪ ಸಂಭವಿಸಿದೆ.

ಪಾಪುವ ನ್ಯೂಗಿನಿಯಾವು ನ್ಯೂಗಿನಿಯಾ ದ್ವೀಪದ ಪೂರ್ವಾರ್ಧ, ಇಂಡೋನೇಷ್ಯಾದ ಪೂರ್ವಕ್ಕೆ ಮತ್ತು ಆಸ್ಟ್ರೇಲಿಯಾದ ಉತ್ತರಕ್ಕೆ ಇದೆ. ಇದು ಪೆಸಿಫಿಕ್ “ರಿಂಗ್ ಆಫ್ ಫೈರ್” ವ್ಯಾಪ್ತಿಯಲ್ಲಿ ನೆಲೆಗೊಂಡಿದೆ. ಇದು ಪೆಸಿಫಿಕ್ ಮಹಾಸಾಗರದ ಸುತ್ತಲಿನ ಭೂಕಂಪನ ವಲಯದಲ್ಲಿದ್ದು, ಅಲ್ಲಿ ಪ್ರಪಂಚದ ಹೆಚ್ಚಿನ ಭೂಕಂಪಗಳು ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಸಂಭವಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!