ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ್ ಚರಣ್ ಅವರ ಪತ್ನಿಯಾಗಿ, ಅಪೋಲೋ ಕಂಪನಿಯ ಮೂಲಕ ವ್ಯಾಪಾರ ಮಹಿಳೆಯಾಗಿ ಉಪಾಸನಾ ಉತ್ತಮ ಕೆಲಸದಿಂದ ಹೆಸರು ಮಾಡಿದ್ದಾರೆ. ಹೊಸದಾಗಿ ಮದುವೆಯಾಗಿ ಮಾಧ್ಯಮಗಳ ಮುಂದೆ ಇರದಿದ್ದರೂ ಈಗ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
ಉಪಾಸನಾ ಸದ್ಯ ತಾಯಿಯಾಗುತ್ತಿದ್ದಾರೆ. ಮದುವೆಯಾದ ಸುಮಾರು 10 ವರ್ಷಗಳ ನಂತರ ಗರ್ಭಿಣಿಯಾದ ಉಪಾಸನಾ ಸಂದರ್ಶನವೊಂದರಲ್ಲಿ ಗರ್ಭಾವಸ್ಥೆಯ ವಿಚಾರದಲ್ಲಿ ಏಕೆ ತಡವಾಯಿತು ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಉಪಾಸನಾ ಹೇಳಿದ್ದು..ಸಮಾಜ ಬಯಸಿದಾಗ ಅಲ್ಲ, ನಾನು ತಾಯಿಯಾಗಬೇಕೆಂದು ಬಯಸಿದಾಗ ನಾನು ಗರ್ಭಿಣಿಯಾಗಿದ್ದಕ್ಕೆ ಸಂತೋಷವಾಗಿದೆ. ನಾನು ಮತ್ತು ಚರಣ್ ಮದುವೆಯಾಗಿ ಹತ್ತು ವರ್ಷಗಳ ನಂತರವೇ ನಾವು ಮಗುವನ್ನು ಹೊಂದಬೇಕೆಂದು ಬಯಸಿದ್ದೆವು. ನಾವಿಬ್ಬರೂ ನಮ್ಮ ಕ್ಷೇತ್ರಗಳಲ್ಲಿ ಚೆನ್ನಾಗಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ನಮ್ಮ ಮಕ್ಕಳಿಗೆ ಬೇಕಾದ ಎಲ್ಲ ವಸ್ತುಗಳನ್ನು ತಾವೇ ಒದಗಿಸುವ ಮಟ್ಟಕ್ಕೆ ಹೋಗಬೇಕು ಎಂದುಕೊಂಡೆವು. ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದು ಎಂಬ ಮಾತನ್ನು ಹೇಳಿದ್ದಾರೆ. ಈ ಹತ್ತು ವರ್ಷಗಳಿಂದ ಸಮಾಜ, ಸಂಬಂಧಿಕರು ಮತ್ತು ಅನೇಕ ಪರಿಚಯಸ್ಥರು ನನ್ನ ಗರ್ಭಧಾರಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಅವರ ಮಾತಿಗೆ ಕಿವಿಗೊಡಲಿಲ್ಲ. ಯಾಕೆಂದರೆ ನಮ್ಮಿಬ್ಬರ ಬಾಂಧವ್ಯ ಗಟ್ಟಿಯಾಗಿದೆ. ನಾವು ಬಯಸಿದಾಗ ನಾವು ಪೋಷಕರಾಗುತ್ತಿರುವುದಕ್ಕೆ ತುಂಬಾ ಖುಷಿಯಿದೆ ಎಂಬ ಮಾತನ್ನಾಡಿದರು.