MUST READ | ಎಷ್ಟ್‌ ಪ್ರಶ್ನೆ ಕೇಳ್ತ್ಯಾ? ಬೈದ್ರೂ ಪರವಾಗಿಲ್ಲ ಪ್ರಶ್ನೆಗಳನ್ನು ಕೇಳೋದನ್ನು ನಿಲ್ಲಿಸಲೇಬೇಡಿ..

ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಸಾಕಷ್ಟು ಸಾಲು ಸಾಲು ಪ್ರಶ್ನೆಗಳಿರುತ್ತವೆ. ಆದರೆ ಕೇಳೋದಕ್ಕೆ ನಾಚಿಕೆ, ಕೇಳಿದರೆ ನನ್ನ ಬೆಲೆ ಕಡಿಮೆಯಾದೀತು ಎನ್ನೋ ಅಹಂ, ನಾನ್ಯಾಕೆ ಅವರನ್ನು ಕೇಳಬೇಕು ಅನ್ನೋ ಧಿಮಾಕು.. ಹೀಗೆ ಪ್ರಶ್ನೆಗಳನ್ನು ಕೇಳಿದವ ಆ ಕ್ಷಣಕ್ಕೆ ದಡ್ಡ ಎನಿಸಬಹುದು, ಆದರೆ ವಿಷಯ ಕಲಿತ ಅವನು ಸದಾ ಜಾಣನಾಗ್ತಾನೆ. ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುವ ಅಭ್ಯಾಸ ನಿಮ್ಮದಾಗಲಿ.. ಯಾಕೆ ಗೊತ್ತಾ?

Stop Trying to Ask 'Smart Questions' - The Atlantic

  • ನಿಮ್ಮ ತಲೆಯಲ್ಲಿ ಏನೋ ಒಂದು ಇರುತ್ತದೆ, ಅದನ್ನು ಕ್ಲಾರಿಫೈ ಮಾಡಿಕೊಳ್ಳೋದಕ್ಕೆ ಸಾಕಷ್ಟು ಪ್ರಶ್ನೆಗಳಿರುತ್ತವೆ. ಪ್ರಶ್ನೆ ಕೇಳಿ ಉತ್ತರ ಪಡೆದರೆ, ತಲೆಯಲ್ಲಿ ಕೊರೆಯೋ ವಿಷಯ ಹೋಗಿಬಿಡುತ್ತದೆ.

    20 Questions Game: 147 Great Questions to Try

  • ಪ್ರಶ್ನೆ ಕೇಳೋದು ಇನ್ನೊಂದು ಸ್ಥಳದಲ್ಲಿ ತುಂಬಾ ಮುಖ್ಯ, ನೀವು ಯಾವುದಾದರೂ ಕಾರ್ಯಕ್ರಮವನ್ನು ಹೋಸ್ಟ್‌ ಮಾಡುತ್ತಿದ್ದರೆ, ಪಾಠ ಮಾಡುವವರಾದರೆ ನಿಮ್ಮ ಆಡಿಯನ್ಸ್‌ನನ್ನು ಹಿಡಿದಿಟ್ಟುಕೊಳ್ಳೋದಕ್ಕೆ ಪ್ರಶ್ನೆ ಕೇಳಲೇಬೇಕು.

    200 Best Questions To Ask To Get To Know Someone

  • ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ಇತರರಿಗೆ ತಿಳಿಸೋದಕ್ಕೆ ಪ್ರಶ್ನೆ ಕೇಳುವುದಕ್ಕಿಂತ ಬೇರೆ ಉತ್ತಮ ಮಾರ್ಗ ಇಲ್ಲ.

    Best 100+ Question Pictures [HD] | Download Free Images & Stock Photos on Unsplash

  • ನಿಮ್ಮ ಅನುಮಾನಗಳಿಗೆ ಉತ್ತರ ಬೇಕಲ್ವಾ? ಪ್ರಶ್ನೆ ಕೇಳಿದ್ರೆ ಆಯ್ತು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ, ಮತ್ತೊಂದು ಪ್ರಶ್ನೆ ಹುಟ್ಟುತ್ತದೆ, ಮತ್ತೆ ಅದಕ್ಕೆ ಉತ್ತರ ಹೀಗೆ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.

    Answers of 7 Common Questions About Domestic and Family Violence

  • ಜ್ಞಾನ ಭಂಡಾರ ಹೆಚ್ಚು ಮಾಡಿಕೊಳ್ಳೋಕೆ ಪ್ರಶ್ನೆ ಕೇಳೋದು ತುಂಬಾನೇ ಮುಖ್ಯ. ನಿಮ್ಮ ವಿಷಯಗಳ ಮೇಲಿನ ಹಿಡಿತ, ಜ್ಞಾನ ಎಲ್ಲವೂ ಹೆಚ್ಚಾಗುತ್ತದೆ.

    Innovation And New Ideas Lightbulb Concept With Question Mark Stock Photo - Download Image Now - iStock

  • ಪ್ರಶ್ನೆ ಕೇಳದಿದ್ರೆ ನಿಮಗೆ ಎಲ್ಲವೂ ಅರ್ಥವಾಗಿದೆ ಎಂದೇ ಅರ್ಥ, ಪ್ರತೀ ಕ್ಲಾಸ್‌ನಲ್ಲಿ ಪ್ರತೀ ಮೀಟಿಂಗ್‌ನಲ್ಲಿ ಕಡೆಗೆ ಎನಿ ಡೌಟ್ಸ್? ಎನಿ ಕ್ವೆಶ್ಚನ್ಸ್‌ ಅಂತ ಕೇಳಿಯೇ ಇರುತ್ತಾರೆ ಅಲ್ವಾ?

    Answering the Question Behind the Questions People Ask You - outreachmagazine.com

  • ಕಮ್ಯುನಿಕೇಷನ್‌ ಜೀವನದ ಪ್ರಮುಖ ಅಂಶ. ಪ್ರಶ್ನೆಗಳನ್ನು ಕೇಳುತ್ತಾ ಕೇಳುತ್ತಾ ನಿಮ್ಮ ಕಮ್ಯನಿಕೇಶನ್‌ ಇಂಪ್ರೂವ್‌ ಆಗುತ್ತದೆ. ಮಾತು ಚೆನ್ನಾಗಿ ಆಡುವವರಿಗೆ ಯಾವ ಸಮಸ್ಯೆಯೂ ಇಲ್ಲ. ಈ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ?

    71 Questions of the Day for Kids They'll Get Excited About | YourDictionary

  • ಯಾವುದೇ ಸಂಬಂಧದಲ್ಲಿ ನಂಬಿಕೆ ಬೆಳೆಯೋದಕ್ಕೆ ಈ ಪ್ರಶ್ನೆ ಉತ್ತರಗಳೇ ಕಾರಣ. ಸರಿಯಾದ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಉತ್ತರ ಕಂಡುಕೊಳ್ಳುವಾಗ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. ನಿಮ್ಮ ನಡುವೆ ಇರೋ ಮಾತುಕತೆಯಲ್ಲಿ ಅರ್ಧದಷ್ಟು ಪ್ರಶ್ನೆಗಳೇ? ಅಲ್ವಾ? ಯಾವ ತಿಂಡಿಬೇಕು? ಎಲ್ಲಿಗೆ ಹೋಗೋಣ? ಸ್ನಾನ ಮಾಡ್ತ್ಯಾ? ಯಾಕೆ ಕೋಪ? ಹುಷಾರಿಲ್ವಾ? ಹೀಗೆ…

    Leading Questions in Surveys - SmartSurvey

ಎಂದಿಗೂ ಯಾವ ಕಾರಣಕ್ಕೂ ಎಷ್ಟು ಜನರ ಮುಂದೆಯಾದರೂ ಇರಲಿ ಪ್ರಶ್ನೆಗಳನ್ನು ಕೇಳೋದಕ್ಕೆ ಹಿಂಜರಿಯಬೇಡಿ. ಅನಿಸಿದ್ದನ್ನು ಕೇಳುವ ಸ್ವಾತಂತ್ರ್ಯ ನಿಮಗಿದೆ. ಆದರೆ ಸರಿಯಾದ ಪದಬಳಕೆ ಮಾಡಬೇಕಷ್ಟೇ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!