ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬ ಬಿಜೆಪಿ ಆರೋಪಗಳ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿಯೇ ಉತ್ತರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಬಿಜೆಪಿ ಹೇಳುವುದನ್ನೇ ನೀವೂ ಯಾಕೆ ಯಾವಾಗಲೂ ಹೇಳುತ್ತೀರಿ” ಎಂದು ಪ್ರಶ್ನಿಸಿದ್ದಾರೆ .
ಇಂದು ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ, ಸೂರತ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸಿದರು ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರಶ್ನಿಸಲಾಯಿತು.
ನೀವು ಯಾವಾಗಲೂ ಬಿಜೆಪಿ ಹೇಳುವುದನ್ನು ಏಕೆ ಹೇಳುತ್ತೀರಿ? ಪ್ರತಿ ಬಾರಿ ಬಿಜೆಪಿ ಹೇಳುವುದನ್ನು ನೀವು ಹೇಳುತ್ತೀರಿಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಸರಳವಾದ ವಿಷಯವಿದೆ. ಅದಾನಿ ಶೆಲ್ ಕಂಪನಿಗಳಲ್ಲಿರುವ ₹ 20,000 ಕೋಟಿ ಯಾರಿಗೆ ಸೇರಿದೆ? ಇವರು ಬೇನಾಮಿಗಳು, ಅದು ಯಾರದ್ದು? ಎಂದು ಕೇಳಿದ್ದಾರೆ.