ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟಾನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಖುದ್ದು ಚಿಯರ್ ಮಾಡಲು ರಿಷಬ್ ಪಂತ್ ಮೈದಾನಕ್ಕೆ ಆಗಮಿಸಿದ್ದರೆ , ಇತ್ತ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿದೆ.
ಡೇವಿಡ್ ವಾರ್ನರ್, ಸರ್ಫರಾಜ್ ಖಾನ್ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ಮೊತ್ತ ಟಾರ್ಗೆಟ್ ನೀಡಿದೆ.
ಪೃಥ್ವಿ ಶಾ ಕೇವಲ 7 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಶ್ ನಿರ್ಗಮಿಸಿದರು. ಮಾರ್ಶ್ 4 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟ ಆರಂಭಿಸಿದರು.
ಡೇವಿಡ್ ವಾರ್ನರ್ ಹಾಗೂ ಸರ್ಫರಾಜ್ ಖಾನ್ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ 32 ಎಸೆತದಲ್ಲಿ 37 ರನ್ ಸಿಡಿಸಿದ ಡೇವಿಡ್ ವಾರ್ನರ್ ವಿಕೆಟ್ ಪತನಗೊಂಡಿತು. ಇತ್ತ ರಿಲೆ ರೊಸೊ ಡಕೌಟ್ ಆದರು. 67 ರನ್ಗೆ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಹೋರಾಟ 20 ರನ್ಗೆ ಅತ್ಯವಾಯಿತು.
ಸರ್ಫರಾಜ್ ಖಾನ್ ಎಚ್ಚರಿಕೆ ಹೋರಾಟ ನೀಡಿದರೂ 30 ರನ್ಗೆ ಅಂತ್ಯಗೊಂಡಿತು. ಇತ್ತ ಅಕ್ಸರ್ ಪಟೇಲ್ ಹೋರಾಟ ಆರಂಭಿಸಿದರು. ಅಮನ್ ಹಕೀಮ್ ಖಾನ್ ಕೇವಲ 8 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ 22 ಎಸೆತದಲ್ಲಿ 36 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.