ಶ್ರೀ ವೀರನಾರಾಯಣ ದೇವಸ್ಥಾನ: ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆ , ದೇವಾಲಯದ ವೆಬ್ ಸೈಟ್ ಲೋಕಾರ್ಪಣೆ  

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ದೇವಾಲಯದ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮವು ಎಪ್ರಿಲ್ 3 ರಂದು ನಡೆಯಿತು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರನ್ನು ಶ್ರೀ ಕ್ಷೇತ್ರದ ಮಾತೃ ಮಂಡಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ಈ ಸಂಧರ್ಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಅನಂತ ಉಪಾಧ್ಯಾಯರು, ವಿದ್ವಾನ್ ಶ್ರೀ ಶ್ರೀ ಹರಿ ಉಪಾಧ್ಯಾಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.

ನಡೆದ ಸಮಾರಂಭದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀ ಕ್ಷೇತ್ರದ ವೆಬ್ ಸೈಟ್, ಜಾಲತಾಣವನ್ನು ಲೋಕಾರ್ಪಣೆಗೊಳಿಸಿದರು ಡಿ.ಕೆ ಪಿಕ್ಸೆಲ್ ಪ್ರೊಡಕ್ಷನ್ ನ ಮಾಲೀಕರಾದ ಧನುಷ್.ಎಸ್. ಶಕ್ತಿನಗರ ಹಾಗೂ ಹ್ಯಾಷ್ ಇನ್ಫೋಟೆಕ್ ನ ಮಾಲೀಕ ಶ್ರೀಜಿತ್.ಆರ್ ಹಾಗೂ ಅವರ ತಂಡದ ಸಹಯೋಗದೊಂದಿಗೆ ವೆಬ್ ಸೈಟ್ ಡೆವಲಪ್ ಮಾಡಿ, ದೇವಾಲಯಕ್ಕೆ ಉನ್ನತ ಮಟ್ಟದ ಜಾಲತಾಣವನ್ನು ರಚಿಸಿ ಜೊತೆಯಾಗಿ ಸೇವಾರೂಪದಲ್ಲಿ ನೀಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ದ್ವಿಭಾಷೆಯಲ್ಲಿ ಈ ಜಾಲತಾಣ ರಚಿಸಲಾಗಿದೆ.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಪುರುಷೋತ್ತಮ ಕುಲಾಲ್ ಕಲ್ಬಾವಿ, ದಾಮೋದರ್.ಎ, ಎಂ.ಪಿ.ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮುಂಬೈನ ಸುನಿಲ್ ಸಾಲ್ಯಾನ್, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಸಂಚಾಲಕರಾದ ಬಿ. ಸುರೇಶ್ ಕುಲಾಲ್, ಬ್ರಹ್ಮಕಲಶೋತ್ಸವ ಹಸಿರು ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಕೆ. ಸುಂದರ್ ಕುಲಾಲ್, ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷರಾದ ಗೀತಾ ಮನೋಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರ
ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ, ಶ್ರೀ ವೀರನಾರಾಯಣ ಮಾತೃ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಸಂಚಾಲಕರು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳು ಸೇರಿದಂತೆ ಅಪಾರ ಭಕ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!